

ಮಂಡ್ಯ: ಪಾಲಕರು ಸ್ವಲ್ಪ ಮನಸ್ಸು ಮಾಡಿ ತಮ್ಮ ಮಕ್ಕಳಿಗೆ ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಆಸಕ್ತಿ ಹುಟ್ಟಿಸಲು ಪ್ರಯತ್ನಪಟ್ಟರೆ, ಖಂಡಿತ ಕನ್ನಡ ನಾಡಿನ ಇತಿಹಾಸವನ್ನು ಮತ್ತೆ ಮುಗಿಲೆತ್ತರಕ್ಕೆ ಏರಿಸುತ್ತಾರೆ. ಈ ನಿಟ್ಟಿನಲ್ಲಿ ದತ್ತಿ ದಾನಿಗಳ ಆಶಯವನ್ನು ಮುಂದಿನ ತಲೆಮಾರಿಗೆ ವಿಸ್ತರಿಸಬೇಕು. ಆಗ ಇಂತಹ ಉಪನ್ಯಾಸಗಳು ಸಾರ್ಥಕತೆ ಪಡೆಯುತ್ತವೆ ಎಂದು ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ತಿಳಿಸಿದರು.
ನಗರದ ಜಿಲ್ಲಾ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಅವರು, ನಾವೆಲ್ಲ ತಿಂಗಳಿಗೆ ಕನಿಷ್ಟ ಒಂದಾದರೂ ಪುಸ್ತಕವನ್ನು ಓದುವ ಸಂಕಲ್ಪ ಮಾಡಬೇಕು. ಓದಿ ಒಳ್ಳೆಯ ವಿಷಯ ಗ್ರಹಿಸಿ ಎಳೆಯ ಮಕ್ಕಳಿಗೆ ಮುಟ್ಟಿಸೋಣ. ನಾವು ಮೊಬೈಲ್, ಟಿವಿ, ಧಾರಾವಾಹಿಗಳತ್ತ ಮನಸ್ಸನ್ನು ಕೇಂದ್ರೀಕರಿಸಿಕೊAಡರೆ, ನಮ್ಮ ಮಕ್ಕಳು ಅದನ್ನೇ ಮುಂದುವರಿಸಿಕೊAಡು ಹೋಗುತ್ತಾರೆ. ಇಂದಿನ ಮಕ್ಕಳೇ ಮುಂದಿನ ಜನಾಂಗ ಅನ್ನುವಂತಹ ಮಾತನ್ನು ನೆನಪಿಟ್ಟುಕೊಂಡು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬAಧಪಟ್ಟAತೆ ಒಂದಷ್ಟು ಆಸಕ್ತಿಯನ್ನು ಹುಟ್ಟಿಸಬೇಕು. ಈ ಮೂಲಕ ನಾಳಿನ ಸಮಾಜಕ್ಕೆ ನಾವು ಒಂದು ದೊಡ್ಡ ಉಡುಗೊರೆಯನ್ನು ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ದಿ.ಹನುಮಂತ ಮುಡಬಿ ಸ್ಮಾರಕ ದತ್ತಿಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಾಹಿತ್ಯ ಭಾಷಣಗಳ ಕುರಿತು ಸಾಹಿತಿ ಕೊತ್ತತ್ತಿ ರಾಜು ಉಪನ್ಯಾಸ ನೀಡಿ, ಅಂಬೇಡ್ಕರ್ ಅವರು ಒಬ್ಬ ಮಹಾ ಮಾನವತಾವಾದಿ, ರಾಷ್ಟಿçÃಯವಾದಿ, ಅಪ್ರತಿಮ ಚಿಂತಕ, ಸಾಮಾಜಿಕ ಕಾರ್ಯಕರ್ತರಾಗಿ, ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದರು. ಒಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಎಷ್ಟೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಅಂಬೇಡ್ಕರ್ ಉದಾಹರಣೆಯಾಗಿ ನಿಲ್ಲುತ್ತಾರೆ. ಸಾಮಾಜಿಕ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಕಾಲೇಜು ವಿದ್ಯಾಭ್ಯಾಸ ಮುಗಿಸಿ ವಿದೇಶಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಕೇಂದ್ರ ಸರ್ಕಾರ ಭಾರತ ರತ್ನ ನೀಡಿದರೆ, ವಿಶ್ವಸಂಸ್ಥೆ ೧೨೫ ನೇ ಜನ್ಮದಿನಾಚರಣೆ ಸಂಧರ್ಭದಲ್ಲಿ ವಿಶ್ವಜ್ಞಾನ ದಿನ ಎಂದು ನಿಗದಿಪಡಿಸಿ ಜಾಗತಿಕ ಮನ್ನಣೆ ನೀಡಿದೆ. ಇವರು ಅನೇಕ ಕೃತಿಗಳನ್ನು ರಚಿಸಿದ್ದರು ಅಲ್ಲದೆ ನಾಲ್ಕಾರು ಪತ್ರಿಕೆಗಳನ್ನು ನಡೆಸುತ್ತಿದ್ದರು. ಅವರು ತಮ್ಮ ಆಶಯಗಳನ್ನು ತಮ್ಮ ಭಾಷಣಗಳ ಮೂಲಕವೂ ನೀಡಿದ್ದಾರೆ ಅವರ ಚಿಂತನೆಗಳು ಬಹಳ ಮೌಲಿಕವಾಗಿದೆ ಎಂದರಲ್ಲದೇ ಅವರ ಐದು ಬರೆಹಗಳ ಬಗೆಗಿನ ಸಾರವನ್ನು ಸಭೆಯ ಮುಂದಿಟ್ಟರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಸ್ವಾತಂತ್ರö್ಯ ಹೋರಾಟಗಾರ ಇಂಡುವಾಳು ಹೊನ್ನಯ್ಯ ದತ್ತಿ ಮತ್ತು ಗೌರಮ್ಮ ಸಿದ್ದರಾಮಯ್ಯ ದತ್ತಿ ವಿಷಯ ಕೃಷಿ ಬಗ್ಗೆ ಉಪನ್ಯಾಸ ನೀಡಿದರು. ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ಧನಂಜಯ ದರಸಗುಪ್ಪೆ, ಎಂ.ಸಿ.ಭಾಸ್ಕರ್, ಹೊಳಲು ಶ್ರೀಧರ್, ಸುವರ್ಣಾವತಿ, ಗಾಮನಹಳ್ಳಿ ಮಹದೇವಸ್ವಾಮಿ, ಸುಜಾತ ಕೃಷ್ಣ, ಕ್ರಾಂತಿಸಿAಹ, ಪ್ರಕಾಶ್ ಮೇನಾಗ್ರ, ಪೂರ್ಣಚಂದ್ರ, ಬಸವೇಗೌಡÀ, ಉಮಾಶಂಕರ್, ಚೇತನಕುಮಾರ್ ಇದ್ದರು.