

ವಿಜಯಪುರ: ಬಬಲೇಶ್ವರ ತಾಲೂಕಿನ ಅರ್ಜುಣಗಿಯ ಅರ್ಜುನ ಎಂದೇ ಖ್ಯಾತಿ ಪಡೆದಿದ್ದ ಸ್ವಾತಂತ್ರ ಯೋಧ ಚನ್ನಬಸಪ್ಪ ಅಂಬಲಿ ಕರ್ನಾಟಕದ ಏಕೀಕರಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಾವಿಲ್ಲದ ಶರಣರಾಗಿ ಅಮರರಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಟಕಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾ ಟಕ ಅತ್ಯಂತ ಕ್ರಿಯಾಶೀಲವಾಗಿ ಯುಗ ಪುರುಷರ, ಮಹಾನ್ ವ್ಯಕ್ತಿಗಳ ಪರಿಚಯದ ಮೂಲಕ ದತ್ತಿ ಗೋಷ್ಠಿಗಳಿಗೆ ಚೈತನ್ಯ ತುಂಬುತ್ತಿದೆ. ಅಲ್ಲದೆ, ಸಾಹಿತ್ಯಾಸಕ್ತರ ಮನ ತಣಿಸುವ ನಿಟ್ಟಿನಲ್ಲಿ ನಿರಂತರ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸುತ್ತಿದೆ ಎಂದರು.
ಹೊನ್ನಳ್ಳಿಯ ಶಿವಶರಣೆ ನಿಲೂರ ನಿಂಬೆಕ್ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಡಿ. ಕುಮಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲೆ ಮರೆಯ ಕಾಯಿಯಂತಿರುವ ಸ್ವಾತಂತ್ರ ಹೋರಾಟಗಾರರ ಪರಿಚಯಿಸುವುದು, ಚಿಂತನಾತ್ಮಕ ಉಪನ್ಯಾಸ ಹಮ್ಮಿಕೊಳ್ಳುವುದು ಹಾಗೂ ಸಮಾಜಕ್ಕೆ ನೆರವಾಗಿ ನಿಂತ ಮಹನೀಯರನ್ನು ದತ್ತಿಗೋಷ್ಠಿಗಳ ಮೂಲಕ ಸ್ಮರಿಸುವ ಕಾರ್ಯ ಮಾಡುತ್ತಿರುವ ಕಸಾಪ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು. ಉಪನ್ಯಾಸಕ ಬಸವರಾಜ ಕುಂಬಾರ ಉಪನ್ಯಾಸ ನೀಡಿದರು.
ಹೇಮಾವತಿ ಪಾಟೀಲ, ಟಿ.ಆರ್. ಹಾವಿನಾಳ, ಬಸವರಾಜ ಜಾಲಗೇರಿ, ಬೀರಪ್ಪ ಜುಮನಾಳ, ಸುನಂದಾ ಯಂಪೂರೆ, ಗುರುದೇವ ಅಂಬಲಿ ಹಾಗೂ ಸಿದ್ರಾಮಪ್ಪ ಅಂಬಲಿ ವೇದಿಕೆಯಲ್ಲಿದ್ದರು.
ಹರಿಯಾಣದ ಕಲಾ ಮತ್ತು ಸಂಗೀತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಸಿಂದಗಿಯ ಗುರುದೇವಾಶ್ರಮದ ಗಂಗಾಧರ ಸ್ವಾಮೀಜಿ ಅವರನ್ನು ಕಸಾಪ ಟಕದಿಂದ ಗೌರವಿಸಿದರು. ಅಲ್ಲದೆ, ಇತ್ತೀಚೆಗೆ ಅಹಮದಾಬಾದ್ನಲ್ಲಿ ವಿಮಾನ ಅಪಘಾತದಲ್ಲಿ ಅಸುನೀಗಿದರಿಗೆ ಮೌನ ಆಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ಆಶಾ ಬಿರಾದಾರ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ, ಬಿ.ಎಂ. ಆಜೂರ, ಬಿ.ಕೆ. ಗೋಟ್ಯಾಳ, ಎನ್.ಕೆ. ಕುಂಬಾರ, ಬಿ.ಎಂ. ಮಸಬಿನಾಳ, ಎಂ.ಬಿ. ಭಾವಿಕಟ್ಟಿ, ಶ್ರೀಕಾಂತ ನಾಡಗೌಡ, ಎಸ್.ಬಿ. ಹಳ್ಳಿ, ಎಸ್.ಎಸ್. ಮಾನೆ, ಎಂ.ಜಿ. ಶಿರೋಳ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಾಂತಾ ವಿಭೂತಿ, ತೇಜಸ್ವಿನಿ ವಾಂಗಿ, ಸುರೇಶ ಅಂಬಲಿ, ಅಶೋಕ ಕೊಳಾರಿ, ವೈ.ಎಚ್. ಲಂಬು, ಜಯಪ್ರಕಾಶ ಅಂಬಲಿ, ಬಸನಗೌಡ ಬಿರಾದಾರ, ಎಂ.ಜಿ. ಮೋಟಗಿ, ಶರಣಗೌಡ ಪಾಟೀಲ, ಭಾಗಿರಥಿ ಸಿಂಧೆ, ಕೃತಿಕಾ ಯಂಪೂರೆ, ಕೆ.ಎಸ್. ಹಣಮಾಣಿ, ಜಿ.ಎಸ್. ಬಳ್ಳೂರ, ಎಸ್.ಎಸ್. ಬೆಟಗೇರಿ, ಪ್ರದಿಪ ವಾಲಕೋಡಿ, ಶ್ರೀಶೈಲ ಸೋಮಪುರ, ಎನ್.ಎಸ್. ಅಂಗಡಿ, ಎಂ.ಎನ್. ನಿಂಬಾಳ, ಶಿವಾಜಿ ಮೋರೆ, ಎ.ಎಸ್. ಬುರಾಣಗೋಳ, ಬಸವರಾಜ ಹಿರೇಮಠ, ಎಂ.ಜಿ. ಕಾಲೇಬಾಗ, ನಿತ್ಯಾನಂದ ಮತ್ತಿತರರಿದ್ದರು.
ವಿಜಯಾ ಬಿರಾದಾರ ಪ್ರಾರ್ಥಿಸಿದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.