

ಮುಂಡರಗಿ: ತಾಲೂಕು ಕಸಾಪ ಭವನ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು ಭವನ ಉದ್ಘಾಟನೆ ಸಂದರ್ಭದಲ್ಲಿಯೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣಕ್ಕೆ ಡಾ.ಅನ್ನದಾನೀಶ್ವರ ಶ್ರೀಗಳು ಜಾಗ ನೀಡಿದ್ದಾರೆ. ದಾನಿಗಳಿಂದ 12 ಲಕ್ಷ ರೂ.ಗಿಂತ ಹೆಚ್ಚು ದೇಣಿಗೆ ಸಂಗ್ರಹವಾಗಿದ್ದು, ಶೇ.75 ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ, ಕಸಾಪ ಮಾಜಿ ತಾಲೂಕಾಧ್ಯಕ್ಷ ಎಸ್.ಬಿ. ಹಿರೇಮಠ, ಕೋಶಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಶೋಭಾ ಮೇಟಿ, ಸುರೇಶ ಹಲವಾಗಲಿ, ವೀರೇಶ ಮಾತನಾಡಿದರು.
ಸಭೆಯಲ್ಲಿ ತಾಲೂಕು ಕಸಾಪ ಪ್ರ.ಕಾರ್ಯದರ್ಶಿ ಮಂಜುನಾಥ ಮುಧೋಳ ಸಾಹಿತ್ಯ ಪರಿಷತ್ತು ಕಟ್ಟಡ ಪ್ರಗತಿ ಇತರ ಮಾಹಿತಿ ಒದಗಿಸಿದರು. ವೀಣಾ ಪಾಟೀಲ, ಶಂಕರ ಕುಕನೂರ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಸಿ.ಕೆ. ಗಣಪ್ಪನವರ, ಕಾಶಿನಾಥ ಬಿಳಿಮಗ್ಗದ, ಎನ್.ಎನ್. ಕಲಕೇರಿ, ಸುರೇಶ ಬಾವಿಹಳ್ಳಿ, ಮುಲ್ಲಾ, ಲಿಂಗರಾಜ ದಾವಣಗರೆ, ಮಂಜುಳಾ ಇಟಗಿ, ಕರಬಸಪ್ಪ ಹಂಚಿನಾಳ, ಆರ್.ಎಲ್. ಪೋಲಿಸಪಾಟೀಲ, ಡಾ.ನಿಂಗು ಸೊಲಗಿ, ಬಿ.ಬಾಬು, ಎ.ವೈ. ನವಲಗುಂದ, ಮಂಜುನಾಥ ಇಟಗಿ, ದೇವೇಂದ್ರಪ್ಪ ರಾಮೇನಹಳ್ಳಿ, ಶಿವಯೋಗಿ ಕೊಪ್ಪಳ ಇತರರು ಇದ್ದರು.