ಬಹುಮುಖ ವ್ಯಕ್ತಿತ್ವದ ದಿಟ್ಟ ಹೋರಾಟಗಾರ ‘ಕರ್ನಾಟಕದ ಹುಲಿ’ ಅಳವಂಡಿ ಶಿವಮೂರ್ತಿಸ್ವಾಮಿಗಳು

IMG-20240518-WA0014
Published on

ಗದಗ: ಕರ್ನಾಟಕ ಏಕೀಕರಣ ಚಳವಳಿಯ ರೂವಾರಿ ಹೈದರಾಬಾದ ಕರ್ನಾಟಕ ವಿಮೋಚನಾ ಚಳವಳಿ ಹರಿಕಾರ ಲೋಕಸಭಾ ಕ್ಷೇತ್ರದ ಪ್ರಥಮ ಸಂಸದ ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯದಲ್ಲಿ ಉಳಿಸುವಲ್ಲಿ ಯಶ ಕಂಡ ನೇತಾರ ಹೀಗೆ ಬಹುಮುಖ ವ್ಯಕ್ತಿತ್ವದ ದಿಟ್ಟ ಹೋರಾಟಗಾರ ‘ಕರ್ನಾಟಕದ ಹುಲಿ’ ಅಳವಂಡಿ ಶಿವಮೂರ್ತಿಸ್ವಾಮಿಗಳಾಗಿದ್ದರೆಂದು ಸರಕಾರಿ ಪ್ರ.ದರ್ಜೆ ಮಹಿಳಾ ಮಹಾವಿದ್ಯಾಲಯ ಗದಗನ ಕನ್ನಡ ಪ್ರಾಧ್ಯಾಪಕ ಎಸ್.ಯು ಸಜ್ಜನಶೆಟ್ಟರ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ದಿ: ೧೮ ರಂದು ವೇದಮೂರ್ತಿ ಅಳವಂಡಿ ಶಿವಮೂರ್ತಿಸ್ವಾಮಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಚಳವಳಿ ಮತ್ತು ಅಳವಂಡಿ ಶಿವಮೂರ್ತಿ ಸ್ವಾಮಿಗಳು’ಎಂಬ ವಿಷಯವಾಗಿ ಮಾತನಾಡುತ್ತ ೧೯೫೫ ರಲ್ಲಿ ಭಾಷಾವಾರು ಪ್ರಾಂತ ರಚನೆ ಸಂದರ್ಭದಲ್ಲಿ ಕರ್ನಾಟಕದ ಬಳ್ಳಾರಿ ಹೊಸಪೇಟೆ ಹಂಪಿ ಮತ್ತು ತುಂಗಭದ್ರಾ ಆಣೆಕಟ್ಟು ಪ್ರಧೇಶವನ್ನು ವಿಶಾಲ ಆಂದ್ರಪ್ರದೇಶಕ್ಕೆ ಸೇರಿಸುವಂತೆ ಅಂದಿನ ಫಜಲ್ ಅಲಿ ಕಮಿಶನ್ ನಿರ್ಧರಿಸಿತ್ತು .ಇದನ್ನು ತೀವೃವಾಗಿ ವಿರೋಧಿಸಿದ ಸ್ವಾಮಿಗಳು ಸಾವಿರಾರು ಜನ ರೈತರನ್ನು ಸಂಘಟಿಸಿ ಅಮರಣ ಉಪವಾಸ ಸತ್ಯಾಗ್ರಹ ಮಾಡಿದ್ದರು ಇದರ ಫಲವಾಗಿ ನ್ಯಾಯಮೂರ್ತಿ ಮಿಶ್ರ ಸಮಿತಿ ನೇಮಕವಾಗಿ ಬಳ್ಳಾರಿ ಮತ್ತು ತುಂಗಭದ್ರಾ ಡ್ಯಾಂ ಪ್ರದೇಶ ಕರ್ನಾಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ಐತಿಹಾಸಿಕ ಫಟನೆಗೆ ಸ್ವಾಮಿಜಿ ಕಾರಣೀಭೂತರಾಗಿದ್ದಾರೆಂದರು. ೧೯೪೭ ಆಗಸ್ಟ್ ೧೭ ರಲ್ಲಿ ರಜಾಕರ ಹಾವಳಿ ತಪ್ಪಿಸಲು ಕೊಪ್ಪಳ ಜಿಲ್ಲೆ ಮುಂಡರಗಿಯ ಸ್ವಯಂ ಸೇವಕ ಸತ್ಯಾಗ್ರಹಿ ಶಿಬಿರದ ಅಧಿಪತಿಯಾದರು. ಅರೇ ಸೈನಿಕ ತರಬೇತಿ ಪಡೆದು ರಜಾಕರ ಸೈನಿಕರ ಮೇಲೆ ದಾಳಿ ಮಾಡಿ ಸಿಂಹಸ್ವಪ್ನರಾದರು. ಹೋರಾಟದ ಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಅಳವಂಡಿಯಲ್ಲಿ ಕರ್ನಾಟಕ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಉಚಿತ ಪ್ರಸಾದ ನಿಲಯ ಅನಾಥ ಮಕ್ಕಳ ನಿಲಯ ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರಕ್ಕೂ ನಾಂದಿ ಹಾಡಿದರು. ಸ್ವಾಮಿಗಳು ನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಟಕ ಸರಕಾರ ೨೦೦೬ ರಲ್ಲಿ ‘ಸುವರ್ಣ ಏಕೀಕರಣ ಪುರಸ್ಕಾರ’ ನೀಡಿ ಗೌರವಿಸಿದೆಯೆಂದು ಪ್ರೋ ಸಜ್ಜನಶೆಟ್ಟರ ನುಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ ಶಿವಮೂರ್ತಿ ಸ್ವಾಮಿಗಳು ಬದುಕಿನುದ್ದಕ್ಕೂ ಮಾನವೀಯತೆ ಉಸಿರಿದವರು ರಾಷ್ಟಿçÃಯ ಸಮಸ್ಯೆಗಳನ್ನು ತಮ್ಮ ಸಮರ್ಥ ವಾಕ್ಪಟುತ್ವದಿಂದ ಪರಿಣಾಮಕಾರಿಯಾಗಿ ಪ್ರತಿಪಾದಿಸಿ ಸರಕಾರದ ಗಮನಸೆಳೆದ ತತ್ವನಿಷ್ಠ ರಾಜಕಾರಣಿ, ಆದರ್ಶ ಜನನಾಯಕ. ತಮ್ಮ ೨೦ ನೇ ವಯಸ್ಸಿನಲ್ಲಿಯೇ ಸ್ವಾತಂತ್ರö್ಯ ಚಳವಳಿಯಲ್ಲಿ ಪಾಲ್ಗೊಂಡು ಪ್ರಮುಖ ಪಾತ್ರ ವಹಿಸಿದ್ದರೆಂದರು.
ವೇದಿಕೆ ಮೇಲೆ ವಿವೇಕಾನಂದಗೌಡ ಪಾಟೀಲ ಪ್ರೋ. ಎಸ್.ಯು.ಸಜ್ಜನಶೆಟ್ಟರ, ಕ.ವಿ.ವ. ಸಮಿತಿ ಕಾರ್ಯದರ್ಶಿ ಶ್ರೀಮತಿ ವಿ.ಆರ್. ಕಟ್ಟಿಮನಿ ಹಿರೇಮಠ ಪ್ರಾಚಾರ್ಯ ಡಾ. ಬಿ.ಬಿ.ಹೊಳಗುಂದಿ ಶಿವಾನಂದ ಗಿಡ್ನಂದಿ ಕಿಶೋರಬಾಬು ನಾಗರಕಟ್ಟಿ ಡಿ.ಎಸ್.ಬಾಪುರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾ.ಶಾ.ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್.ತಳವಾರ ಎಸ್.ಎಸ್.ಕಳಸಾಪುರಶೆಟ್ರು, ಆರ್ ಡಿ ಕಪ್ಪಲಿ ಪ್ರ.ತೋ ನಾರಾಯಣಪುರ ಎಚ್ ಟಿ ಸಂಜೀವಸ್ವಾಮಿ ಎಚ್.ಕೆ.ದಾಸರ ಷಡಕ್ಷರಯ್ಯಸ್ವಾಮಿ ಕಣ್ವಿಮಠ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಶಿಲ್ಪಾ ಹಿರೇಕೇರೂರ ಡಾ.ಎಂ.ಎಸ್.ಶಿರೋಳ ಡಾ. ಎಸ್.ಎಮ್.ರಾಯನಗೌಡರ ಟಿ.ಎಫ್ ನದಾಫ್ ವಿಜಯಲಕ್ಷಿö್ಮ ಆರ್ ಎಚ್ ಎಂ.ಎಲ್.ಬೆಳಧಡಿ ಡಿ.ಆರ್.ಜಗ್ಗಲ್ ಹಾಗೂ ಬಿ.ಈಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ಪ್ರಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ನಾಡಗೀತೆಯಾಯಿತು. ಡಾ.ಹೊಳಗುಂದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಕಿಶೋರಬಾಬು ನಾಗರಕಟ್ಟಿ ವಂದಿಸಿದರು. ಕುಮಾರಿ ಯಶೋಧಾ ನಾಯ್ಕರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net