

ವಿಜಯವಾಣಿ ಸುದ್ದಿಜಾಲ ಗದಗ
ತಂದೆ ತಾಯಿಗಳು ಬದುಕಿರುವ ಸಂದರ್ಭದಲ್ಲಿ ಅವರ ಕಾಳಜಿ ಮಾಡುವುದು ಸಹಜ. ಆದರೆ, ಅವರ ಅಗಲಿಕೆಯ ನಂತರವೂ ಅವರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಅರ್ಥಪೂರ್ಣ ನಡೆ ಕೈಕೊಂಡಿರುವ ಡಾ.ಧನೇಶ ದೇಸಾಯಿಯವರು ಇತರರಿಗೂ ಮಾದರಿ ಎಂದು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ರವಿವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಟಕದ ಆಶ್ರಯದಲ್ಲಿ ನಗರದ ಪೂಲೀಸ್ ಭವನದಲ್ಲಿ ಜರುಗಿದ ಶೇಕುಬಾಯಿ ದೇಸಾಯಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರತ್ನಕ್ಕ ಪಾಟೀಲ ಅವರು ಅನೇಕ ದಶಕಗಳಿಂದ ಮಠದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಲಿಂಗಾಯತ ಪುಣ್ಯಪುರುಷರ ಮಾಲಿಕೆಯ ಸುಮಾರು 25 ಗ್ರಂಥಗಳಿಗೆ ಗ್ರಂಥದಾಸೋಹ ಮಾಡಿದ್ದಾರೆ. ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿ ಜೀವನ ಸಾಧಿಸಿ, ಶ್ರಮದಿಂದ ಗಳಿಸಿದ ಹಣವನ್ನು ಅನೇಕ ಸಂಸ್ಥೆಗಳಿಗೆ ದಾನವಾಗಿ ನೀಡಿದ್ದಾರೆ. ಪ್ರಶಸ್ತಿ ಪುರಸ್ಕಾರಗಳಿಂದ ದೂರವಿರುವ ಇಂಥವರನ್ನು ಗುರುತಿಸಿ ಡಾ. ಧನೇಶ ದೇಸಾಯಿ ಕುಟುಂಬ ದತ್ತಿ ಪುರಸ್ಕಾರ ನೀಡುತ್ತಿರುವುದು ಶ್ಲಾನೀಯ ಎಂದರು.
ರತ್ನಕ್ಕ ಪಾಟೀಲ, ಎಚ್.ವೈ ದೇಸಾಯಿಗೌಡ್ರ ಮಾತನಾಡಿದರು. ಕಸಾಪ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ದತ್ತಪ್ರಸನ್ನ ಪಾಟೀಲ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ರಾಜಶೇಖರ ಮಠಪತಿ, ಮಡಿವಾಳಪ್ಪ ಸಂಕದ, ಆನ್ನೆ ಮಿನೆರ್ವಾ ಇತರರು ಇದ್ದರು.