ಕಾರವಾರ ಕಸಾಪ ಮಹಿಳಾ ಘಟಕ ಉದ್ಘಾಟನೆ

kasapa
Published on

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲೂಕಿನ ಮಹಿಳಾ ಘಟಕ ಸ್ಥಾಪನೆಯಾಗಿದ್ದು, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಭಾನುವಾರ ಅದಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಾಹಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸುವರ್ಣ ಅವಕಾಶ ಇದಾಗಿದೆ. ಇದಕ್ಕಾಗಿ ೨೫ ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಪ್ರತಿ ತಿಂಗಳು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ನಗರ ಸಭೆಯ ಮಾಜಿ ಸದಸ್ಯ ದೇವಿದಾಸ ನಾಯ್ಕರು ಅತಿಥಿಯಾಗಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವದು ಸಂತಸದಾಯಕವಾಗಿದೆ ಎಂದರು. ಸಾಹಿತಿ ಪ್ರೇಮಾ ಟಿ.ಎಂ.ಆರ್.ಮಾತನಾಡಿ, ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. .ಜಿ.ಡಿ.ಮನೋಜವರು ಪದಾಕಾರಿಗಳ ಹೆಸರನ್ನು ಘೋಷಿಸಿದರು.

ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ಖೈರುನ್ನಿಸಾ ಶೇಖ್ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಬಾಬು ಶೇಖ್,ಗಣೇಶ ಬಿಷ್ಟಣ್ಣನವರ್, ಕೋಶಾಧ್ಯಕ್ಷ ಶಿವಾನಂದ ತಾಂಡೇಲ,ಸದಸ್ಯರಾದ ಎನ್.ಜಿ. ನಾಯ್ಕ,ರಮೇಶ ಗುನಗಿ,ಎ.ಜಿ.ಕೆರಳೆಕರ,ಹಿರಿಯ ವೈದ್ಯರಾದ ಡಾ.ಹೆಗಡೆಕಟ್ಟೆ ಉಪಸ್ಥಿತರಿದ್ದರು.ವಿದ್ಯಾ ನಾಯ್ಕ ಸಂಗಡಿಗರು ನಾಡಗೀತೆ ಹಾಡಿದರು. ದಿವ್ಯಾನಾಯ್ಕ ಸ್ವಾಗತಿಸಿದರು. ಜಯಶೀಲಾ ಬಿಷ್ಟಣ್ಣನವರ್ ಕಾರ್ಯಕ್ರಮ ನಿರೂಪಿಸಿದರು, ನಿವೇದಿತಾ ಕೊಳಂಬಕರ್ ವಂದಿಸಿದರು. ಸೂರಜ್ ಕುರಮಕರ ಸಹಕರಿಸಿದರು.

ಬಹುಮಾನ:

ಶ್ರಾವಣ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾವಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ವಾತಿ ಭಟ್ ಪ್ರಥಮ,ಜಯಶೀಲಾ ಬಿಷ್ಟಣ್ಣನವರ ದ್ವೀತಿಯ, ಪ್ರೇಮಾ ಟಿ.ಎಂ.ಆರ್ ತೃತೀಯ, ವನಿತಾ ಶೇಟ್,ಸ್ನೇಹಾ ನಾಯ್ಕ ಸಮಾಧನಕರ ಬಹುಮಾನ ಪಡೆದರು.ನಿರ್ಣಾಯಕರಾಗಿ ಕೃಷ್ಣಾನಂದ ನಾಯ್ಕ,ಅಶೋಕ ಶೆಟ್ಟಿ, ಸಂಧ್ಯಾ ಹೆಗಡೆ ಆಗಮಿಸಿದ್ದರು. ಲಯನ್ಸ್ ಕ್ಲಬ್ ಸದಾಶಿವಗಡ ಪ್ರಥಮ, ದೇವಿದಾಸ ನಾಯ್ಕ ದ್ವೀತಿಯ, ಬಾಬು ಶೇಖ ತೃತೀಯ, ರಾಮಾ ನಾಯ್ಕ,ಎನ್ ಜಿ ನಾಯ್ಕ ಸಮಾಧಾನಕರ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು.

ಖೈರುನ್ನಿಸಾ ಅಧ್ಯಕ್ಷೆ

ಕಸಾಪ ತಾಲೂಕು ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ಖೈರುನ್ನಿಸಾ ಶೇಖ್,ಗೌರವ ಕಾರ್ಯದರ್ಶಿಗಳಾಗಿ ದಿವ್ಯಾ ದೇವಿದಾಸ ನಾಯ್ಕ,ನಿವೇದಿತಾ ಕೊಳಂಬಕರ್,ಕೊಶಾಧ್ಯಕ್ಷರಾಗಿ ಜಯಶೀಲಾ ಬಿಷ್ಟಣ್ಣನವರ್, ಗೌರವ ಸಲಹೆಗಾರರಾಗಿ ಸಾಹಿತಿ ಪ್ರೇಮಾ ಟಿ.ಎಂ.ಆರ್. ಸದಸ್ಯರಾಗಿ ವಿದ್ಯಾ ರಾಮಾ ನಾಯ್ಕ,ಮಿಲನ್ ನಾಯ್ಕ.ಯಮುನಾ ಗಾಂವಕರ,ಗಂಗಾ ಗುನಗಿ,ಸಂಧ್ಯಾ ಹೆಗಡೆ,ಸಾವಿತ್ರಿ ಗಿರೀಶ್ ರಾವ್,ಲತಾ ಸೂರಜ್ ಕುರಮಕರ್,ಜಯಶ್ರೀ ಗೌಡ ಸೇರಿ ಹದಿಮೂರು ಸದಸ್ಯರ ಸಮಿತಿಯನ್ನು ರಚಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net