

ಕುಶಾಲನಗರ:
ಸಾಕಷ್ಟು ಹಿರಿಯರು ನಿಷ್ಪಕ್ಷಪಾತವಾಗಿ ಕನ್ನಡ ಭಾಷೆಯನ್ನು ಕಟ್ಟಿದ ಪರಿಣಾಮ ಈಗ ಕನ್ನಡ ಸಮೃದ್ಧವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ.ಬಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಸಾಪ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸª ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಕಾಲದಲ್ಲಿ ಸಾಹಿತ್ಯ ರಚನೆಗೆ ಸಂಸ್ಕೃತವನ್ನೇ ಬಳಸಲಾಗುತ್ತಿತ್ತು. ಬಸವೇಶ್ವರರಂಥÀ ಹಲವು ಮಹಾನ್ ವ್ಯಕ್ತಿಗಳು ಕನ್ನಡ ಭಾಷೆಗೆ ಹೊಸ ಭಾಷ್ಯ ಬರೆದರು. ಕನ್ನಡ ಭಾಷೆಯನ್ನು ಸಾಮಾನ್ಯ ಜನರು ಬಳಸುವಂತೆ ಅತ್ಯಂತ ಸರಳವಾಗಿ ರಚಿಸಿದರು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಎಲ್ಲರೂ ಕಲಿಯುವ ಮೂಲಕ ಪ್ರೀತಿಸುವಂತೆ ಆದಾಗ ಮಾತ್ರ ನಮ್ಮ ಹಿರಿಯರ ಶ್ರಮಕ್ಕೆ ಸಾರ್ಥಕತೆ ದೊರೆಯುವುದು ಎಂದರು.
ಕಾರ್ಯದರ್ಶಿ ಎಸ್. ನಾಗರಾಜ್, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕರಾದ ಬಿ.ಬಿ.ಹೇಮಲತಾ, ಕೆ.ಬಿ.ಮಂಜುನಾಥ್, ಪರಮೇಶ್, ದರ್ಶನ, ಮಂಜು ಇತರರು ಉಪಸ್ಥಿತರಿದ್ದರು.