ಕಸಾಪ ಸಂಸ್ಥಾಪನಾ ದಿನ ಆಚರಣೆ

e21fad37-564b-4210-8b2b-3d6b5e110083
ಕನ್ನಡ ಸಾಹಿತ್ಯ ಪರಿಷತ್‌ನ ನಂಜನಗೂಡು ತಾಲೂಕು ಘಟಕ ವತಿಯಿಂದ ಸೋಮವಾರ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on

ನಂಜನಗೂಡು: ಕನ್ನಡ ಸಾಹಿತ್ಯ ಪರಿಷತ್‌ನ ನಂಜನಗೂಡು ತಾಲೂಕು ಘಟಕ ವತಿಯಿಂದ ಸೋಮವಾರ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭುವನೇಶ್ವರಿ ದೇವಿಗೆ ನಿವತ್ತ ಪೌರಾಯುಕ್ತ ಎಂ. ಎನ್.ಶಿವಾನಂಜೇಗೌಡ ಪುಷ್ಪಾರ್ಚನೆ ವಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂಜನಗೂಡಿನ ವಿಶೇಷತೆಗಳು ಹಾಗೂ ಸಾಧಕರ ಕುರಿತು ಉಪನ್ಯಾಸಕ ನಂಜನಗೂಡು ಸತ್ಯನಾರಾಯಣ ವಾತನಾಡಿದರು. ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಚಪ್ಪ, ನಂಜನಗೂಡಿನ ಮಹಿಳಾ ಆಟೋ ಚಾಲಕಿ ಕುವಾರಿ ಐಶ್ವರ್ಯ ಹಾಗೂ ಕಷಿಕ ಬೊಕ್ಕಹಳ್ಳಿ ನಂಜುಂಡಸ್ವಾಮಿ ಅವರನ್ನು ಇದೇ ವೇಳೆ ಗೌರವಿಸಲಾಯಿತು. ನಂತರ ರಾಜೇಂದ್ರಪ್ರಸಾದ್ ಅವರಿಂದ ಕನ್ನಡ ನಾಡು-ನುಡಿ ಕುರಿತ ಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್‌ನ ನಂಜನಗೂಡು ಘಟಕದ ಪ್ರಥಮ ಮಹಿಳಾ ಅಧ್ಯಕ್ಷೆ ಲತಾ ಮುದ್ದುಮೋಹನ್ ವಾತನಾಡಿ, ಶ್ರೀ ಕ್ಷೇತ್ರದಲ್ಲಿ ಸ್ವಂತ ಕನ್ನಡ ಭವನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಎಲ್ಲರ ಸಹಕಾರದಿಂದ ಈಗಾಗಲೇ ಹಾಕಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವ ವಿಶ್ವಾಸ ಹೊಂದಲಾಗಿದೆ. ನಂಜನಗೂಡು ತಾಲೂಕಿನಲ್ಲಿ ಎಲ್ಲ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಎಲ್ಲರ ಸಹಕಾರ ಅಗತ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯೆ ಪೂಜಾ, ಮಹಿಳಾ ಪ್ರತಿನಿಧಿ ಶೋಭಾ ನಾಗಶಯನ ಇತರರಿದ್ದರು. ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಮಂಜುಳಾ ಸ್ವಾಗತಿಸಿದರೆ, ಸಂಟನಾ ಕಾರ್ಯದರ್ಶಿ ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net