

ಚನ್ನರಾಯಪಟ್ಟಣ : ಪಟ್ಟಣದ ವಳಗೇರಮ್ಮ ದೇವಸ್ಥಾನದ ಬಳಿಯ ರೋಷನ್ ನಗರದಲ್ಲಿ ಶೆಡ್ ನಿರ್ಮಾಣ ಮಾಡಿ ಆಕ್ರಮವಾಗಿ ಗೋವುಗಳ ವಧೆ ನಡೆಸುತ್ತಿದ್ದ ಕಸಾಯಿ ಖಾನೆಯನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಮಂಗಳವಾರ ತಹಸೀಲ್ದಾರ್ ಗೋವಿಂದ ರಾಜ ತೆರವುಗೊಳಿಸಿದರು.
ಪಟ್ಟಣದ ಬಾಗೂರು ರಸ್ತೆಗೆ ಹೊಂದಿಕೊಂಡಿರುವ ರೋಷನ್ ನಗರದಲ್ಲಿನ ಅಬ್ದುಲ್ ಹಕ್ ಮತ್ತು ಇರ್ಷಾದ್ ಎಂಬವರಿಗೆ ಸೇರಿದ ಆಕ್ರಮ ಕಸಾಯಿಖಾನೆಯನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ದ 5 ಪ್ರಕರಣ ದಾಖಲಾಗಿದ್ದವು.
ಈ ಬಗ್ಗೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪಕ್ರರಣದ ವಿಚಾರಣೆ ನಡೆಸಲಾಗಿತ್ತು. ಡಿಸಿ ಆದೇಶದ ಮೇರೆಗೆ ಪೊಲೀಸ್ ಬಂದೋಬಸ್ತಿನಲ್ಲಿ ಪೌರ ಕಾರ್ಮಿಕರ ಸಹಾಯದಿಂದ ತೆರವು ಮಾಡಿ ಕಬ್ಬಿಣ, ತಗಡಿನ ಶೀಟ್‌ಗಳನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.