ಕಸಾಯಿಗೆ ಸಾಗಿಸುತ್ತಿದ್ದ 5 ಹಸುಗಳ ರಕ್ಷಣೆ

10-GPT-3
Published on

ಗುಂಡ್ಲುಪೇಟೆ : ತಾಲೂಕಿನ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಹಸುಗಳನ್ನು ರಕ್ಷಿಸಿದ್ದಾರೆ. ಸೋಮವಾರ ಬೇಗೂರು ಸಂತೆಯಲ್ಲಿ ಖರೀದಿಸಿದ ಜಾನುವಾರುಗಳನ್ನು ಟೆಂಪೋದಲ್ಲಿ ತುಂಬಿಕೊಂಡು
ಕಸಾಯಿಖಾನೆಗೆ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಐದು ಹಸುಗಳನ್ನು ವಶ ಕ್ಕೆ ಪಡೆದಿದ್ದಾರೆ. ಟೆಂಪೋ ಚಾಲಕ ಅಬ್ದುಲ್ ಜಬ್ಬಾರ್ ಮತ್ತು ಸಹಚರ ಇರ್ಷಾದ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ರಕ್ಷಿಸಿದ ಹಸುಗಳನ್ನು ಬರಗಿಯ ಪಶುಪಾಲನಾ ಇಲಾಖೆಯ ಗೋಶಾಲೆಗೆ ಕಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಚರಣ್ ಗೌಡ, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಅರಸು, ಸಿಬ್ಬಂದಿ ಕುಮಾರ್, ಕಿಶೋರ್, ಶಿವಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net