

ಹುಬ್ಬಳ್ಳಿ: ಇಲ್ಲಿಯ ಗದಗಕರ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕಳವು ಪ್ರಕರಣ ಭೇದಿಸುವಲ್ಲಿ ಕಸಬಾಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇಹುಬ್ಬಳ್ಳಿಯ ಮುಸ್ಸಬ್ಬೀರ್ ಗದಗಕರ್ (20) ಎಂಬಾತನನ್ನು ಬಂಧಿಸಿ, ಆತನಿಂದ 18.43 ಲಕ್ಷ ರೂ. ಮೌಲ್ಯದ 194 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಗದಗಕರ ಲೇಔಟ್‌ನ ಶಬ್ಬೀರ್ ಅಹ್ಮದ್ ಗದಗಕರ್ ಕುಟುಂಬದವರು ಮನೆಯಲ್ಲಿ ಇಲ್ಲದ ವೇಳೆ ಮನೆಯ ಹಿಂಭಾಗದ ಚಿಲಕ ಮುರಿದು ಚಿನ್ನಾಭರಣ ಕಳವು ಮಾಡಿದ್ದರ ಕುರಿತು ಮೇ 16ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಎಸಿಪಿ ಉಮೇಶ ಚಿಕ್ಕಮಠ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಎಎಸ್‌ಐ ಸಿ.ಎಸ್. ಅಂಗಡಿ ಇತರ ಸಿಬ್ಬಂದಿ, ಆರೋಪಿಯ ಚಲನವಲನವನ್ನು ಗಮನಿಸಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದಲ್ಲಿ ಪ್ರಕರಣ ಭೇದಿಸಿದೆ.