

ಕೊಳ್ಳೇಗಾಲ : 2022-23ನೇ ಸಾಲಿನಲ್ಲಿ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ 16.85 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ಪಟ್ಟಣದ ಶ್ರೀಉಮಾಶಂಕರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
2022-23 ನೇ ಸಾಲಿನಲ್ಲಿ 1,041 ಸದಸ್ಯರಿಗೆ 12,01,90 ,000 ರೂ. ಬೆಳೆ ಸಾಲ ನೀಡಲಾಗಿದೆ. 6 ಸದಸ್ಯರಿಗೆ ಮಧ್ಯಮಾವಧಿ ಟ್ರಾೃಕ್ಟರ್ ಸಾಲ 19,72, 800 ರೂ., ಕೊಡಲಾಗಿದೆ. ಹಾಗೆಯೇ 194 ಸದಸ್ಯರಿಗೆ 90,60, 730 ರೂ.ಗಳನ್ನು ಚಿನ್ನದ ಮೇಲೆ ಸಾಲ ವಿತರಣೆ ಮಾಡಲಾಗಿದೆ. ಸ್ವಸಹಾಯ ಗುಂಪುಗಳಿಗೆ 1,70,12,771 ರೂ. ಸಾಲ ನೀಡಿದ್ದು, 470 ಸದಸ್ಯರಿಗೆ ವ್ಯಾಪಾರಭಿವೃದ್ಧಿ ಸಾಲವಾಗಿ 3,42,48,000 ರೂ. ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ 16 ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷೆ ಶೀಲಾ, ನಿರ್ದೇಶಕ ಮಹೇಶ್, ಚಿಕ್ಕಬಸವೇಗೌಡ, ಶಿವಮೂರ್ತಿ, ಮಹೇಶ್, ಮಹದೇವಸ್ವಾಮಿ, ರಮೇಶ್, ಮಹಾದೇವಪ್ಪ, ಬಾಲಸುಬ್ರಹ್ಮಣ್ಯಸ್ವಾಮಿ, ಶೈಲಜಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ನಾಗರಾಜು, ಸದಸ್ಯರು, ರೈತರು ಇದ್ದರು.