

ಕಾಂಗ್ರೆಸ್‌ನ ಸಾಂಪ್ರಾದಾಯಿಕ ಮತಗಳಿಂದ ಗೆಲುವು ಸಾಽಸಲು ಕಷ್ಟವಿದ್ದು, ಶೇ.೪೦ರಷ್ಟು ಇತರ ಮತಗಳನ್ನು ಸೆಳೆಯಬೇಕಾಗಿದೆ. ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಯಿ ಬೇರಾಗಿದ್ದು, ಇದಕ್ಕೆ ಮಹಿಳಾ ಕಾಂಗ್ರೆಸ್, ಯುವಕ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್‌ನಂತಹ ಎಲ್ಲ ವಿಭಾಗಗಳು ತಂತುಬೇರುಗಳಾಗಿ ಸಹಕಾರ ನೀಡಿದಾಗ ಮಾತ್ರ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಪುತ್ತೂರು ಎಪಿಎಂಸಿಯಲ್ಲಿನ ರೈತಸಭಾ ಭವನದಲ್ಲಿ ಕಾಂಗ್ರೆಸ್ ವಲಯ ಮತ್ತು ಬೂತ್ ಅಧ್ಯಕ್ಷರಿಗೆ ಮಾಹಿತಿ ಕಾರ್ಯಾಗಾರ ಹಾಗೂ ಕಾಂಗ್ರೆಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳೂ ಗೊತ್ತಿರುವುದು ಬೂತ್ ಹಾಗೂ ವಲಯದ ಕಾರ್ಯಕರ್ತರಿಗೆ ಮಾತ್ರ. ಪ್ರತಿಯೊಬ್ಬ ಕಾರ್ಯಕರ್ತರು ತಳಮಟ್ಟದಲ್ಲಿರುವ ಜನರ ಜತೆಗೆ ಸ್ಪಂದಿಸಬೇಕು. ಪಕ್ಷ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸರ್ಕಾರಗಳ ಸೌಲಭ್ಯಗಳನ್ನು ಮುಟ್ಟಿಸುವ ಮೂಲಕ ಜನರ ಪ್ರೀತಿ ಗಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ವಿವಿಧ ಹಂತಗಳಲ್ಲಿ ಪದಾಽಕಾರಿಗಳು ಕಾರ್ಯಾಗಾರಗಳು ನಡೆಯಿತು. ಸಂಜೆ ಕಾಂಗ್ರೆಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ.ತೌಸೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಬಿ.ಕೆ., ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡರಾದ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ರವಿಪ್ರಸಾದ್ ಶೆಟ್ಟಿ, ಹೇಮನಾಥ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಶ್ರೀಪ್ರಸಾದ್ ಪಾಣಾಜೆ, ಕೌಶಲ್‌ಪ್ರಸಾದ್ ಶೆಟ್ಟಿ, ಶಿವರಾಮ ಆಳ್ವ, ಉಲ್ಲಾಸ್ ಕೋಟ್ಯಾನ್, ಶಶಿಕಿರಣ್ ನೂಜಿಬೈಲು, ಎಂ.ಬಿ ನಝೀರ್ ಮಠ ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸುಣ್ಣಗುತ್ತು ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.
ಪಕ್ಷವನ್ನು ಕಾರ್ಯಕರ್ತರ ಶ್ರಮದಿಂದ ತಳಮಟ್ಟದಲ್ಲಿ ಕಟ್ಟುವ ಕೆಲಸಕ್ಕೆ ಹಿರಿಯ ಅನುಭವವನ್ನು ಧಾರೆ ಎರೆಯುವ ಕೆಲಸ ಈ ತರಬೇತಿಯಲ್ಲಿ ನಡೆಯುತ್ತಿದೆ. ಕೇವಲ ವಾಟ್ಸ್ಯಾಪ್‌ನಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಒಬ್ಬ ಶಾಸಕರಿದ್ದಾಗ ನಮ್ಮಲ್ಲಿ ಎಂತಹ ಬದಲಾವಣೆ ತರಬಹುದು ಎಂಬುವುದನ್ನು ಶಾಸಕ ಅಶೋಕ್ ರೈ ತೋರಿಸಿಕೊಡುತ್ತಿದ್ದಾರೆ. ಹಾಗಾಗಿ ಪಕ್ಷದ ಬಲವರ್ಧನೆಗೆ ತಳಮಟ್ಟದಲ್ಲಿ ಸಕ್ರಿಯ ಚಿಂತನೆಗಳು ನಡೆಯಬೇಕು.
| ಮಂಜುನಾಥ ಭಂಡಾರಿ
ಕೆಪಿಸಿಸಿ ಕಾರ್ಯಾಧ್ಯಕ್ಷ