Karwar ಫೆಬ್ರವರಿ 5 ರಿಂದ 9 ರವರೆಗೆ ಟ್ಯಾಗೋರ್ ಕಡಲ ತೀರದಲ್ಲಿ ಕರಾವಳಿ ಸಮುದ್ರ ಉತ್ಸವ

Karwar
Published on

Karwar: ಫೆಬ್ರವರಿ 5 ರಿಂದ 9 ರವರೆಗೆ ಟ್ಯಾಗೋರ್ ಕಡಲ ತೀರದಲ್ಲಿ ಕರಾವಳಿ ಸಮುದ್ರ ಉತ್ಸವ ಆಯೋಜಿಸಲಾಗಿದೆ ಎಂದು ಎಂಎಲ್ ಸಿ ಗಣಪತಿ ಉಳ್ವೇಕರ್ ತಿಳಿಸಿದರು. ಉತ್ಸವದ ಭಿತ್ತಿ ಪತ್ರ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಹಾಗೂ ದೇಶದ ಖ್ಯಾತನಾಮ ಕಲಾವಿದರಿಂದ ಮನೋರಂಜನೆಗಳು ನಡೆಯಲಿವೆ. ಫೆ.9 ರಂದು ತೀರದಲ್ಲಿ ಪಾತಿ ದೋಣಿ ಸ್ಪರ್ಧೆ ಹಾಗೂ ಈಜು ಸ್ಪರ್ದೇಗಳು ನಡೆಯಲಿವೆ ಎಂದು ವಿವರಿಸಿದರು.

Karwar ಸಮುದ್ರ ಉತ್ಸವ ಕಾರ್ಯಕ್ರಮದ ವಿವರ

ಫೆಬ್ರುವರಿ 5 ರಂದು ರಾತ್ರಿ 9 ರಿಂದ ಕಾರವಾರ ಸದಾಶಿವಗಡ ರಿದಂ ಹಾರ್ಟ್ ಬೀಟ್ಸ್ನವರಿಂದ ಸಮುದ್ರ ಮಥನ ನೃತ್ಯ ವೈಭವ, ರಾತ್ರಿ 9.30 ರಿಂದ ಕಾಂತಾರದ ವರಾಹರೂಪಂ ಖ್ಯಾತಿಯ ಸಾಯಿ ವಿಶ್ಲೇಶ ತಂಡದ ನೃತ್ಯ, ಸರಿಗಮದ ನಾದಿರಾಬಾನು, ಮಲಯಾಳಂ, ತುಳು ಹಿನ್ನಲೆ ಗಾಯಕಿ ಮಹಿಮಾ, ಮೆಲೋಡಿ ಮಾಸ್ಟರ್ ಶ್ಯಾಮ್, ಕುನಾಲ ಗಾಂಜಾವಾಲಾ ಖ್ಯಾತಿಯ ಪ್ರಶಾಂತಕುಮಾರ್ ಗಾನಸಿರಿ, ಹೆಜ್ಜೆಗೆಜ್ಜೆ ತಂಡದ ನೃತ್ಯ ವೈಭವ, ಬೆಂಗಳೂರಿನ ತಂಡದ ಫೈರ್‌ಶೋ ಕಾರ್ಯಕ್ರಮದೊಂದಿಗೆ ಭಟ್ಕಳದ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಫೆ.6 ರಂದು ಸಾಯಂಕಾಲ ಸಂಜೆ 7.30 ರಿಂದ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಕುದ್ರೋಳಿ ಗಣೇಶ್ ತಂಡದ ಜಾದೂ, ರಾತ್ರಿ 9 ರಿಂದ ಬೆಂಗಳೂರು ಸುರಕ್ಷಾ ದಾಸ, ವಶುಶ್ರೀ ಹಳೆಮನೆ, ಗಾನ ಸಿರಿಯ ಸ್ವರ ಸಂಗೀತ ಮೆಲೋಡಿಸ್ ಕಾರವಾರರವರಿಂದ ಸಂಗೀತ ಸಂಜೆ.

ಫೆ. 7 ರಂದು ಶ್ರೀಧರ ಕಾಸರಕೋಡ, ಸರ್ವೇಶ್ವರ ಹೆಗಡೆ ಮೂರೂರು ಅವರಿಂದ ಚಂದ್ರಾವಳಿ ವಿಲಾಸ ಹಾಸ್ಯಮಯ ಯಕ್ಷಗಾನ 9 ಸ್ಯಾಂಡಲವುಡ್ ಗಾಯಕ ಜಸ್ಕಿರಣ ಸಿಂಗ್, ದಿವ್ಯಾ ರಾಮಚಂದ್ರ ತಂಡದ ಗಾಯನ ಪ್ರದರ್ಶನಗೊಳ್ಳಲಿದೆ. ಫೆ.8 ರಂದು ಸರೆಗಮಪ ಖ್ಯಾತಿಯ ಮುಂಬೈನ ಶ್ರದ್ಧಾಮಿಶ್ರಾ ತಂಡದಿAದ ಸಂಗೀತ ಸಂಜೆ,

ಫೆ. 9 ರಂದು ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು. ರಾತ್ರಿ.9.30 ರಿಂದ ಮಂಗಳೂರಿನ ನಿಹಲ್ ಟೌರೋ ತಂಡದಿAದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

Karwar  ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷ ಪ್ರಶಾಂತ ತಾಂಡೇಲ, ಸಂಘಟಕರಾದ ಗಿರೀಶ ರಾವ್, ಶಿವಾನಂದ ತಾಂಡೇಲ, ರಾಜೇಂದ್ರ ದುರ್ಗೇಕರ್, ರಾಮನಾಥ ಬೇಳೂರಕರ್, ಗೌರೀಶ ಹರಿಕಂತ್ರ, ಗುರುನಾಥ ಉಳ್ವೇಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net