

ಕಾರವಾರ: ತಮಗೆ ನ್ಯಾಯ ಒದಗಿಸುವಂತೆ ಕಾರವಾರ ಅರ್ಬನ್ ಬ್ಯಾಂಕ್ ಠೇವಣಿದಾರರು ಎಸ್‌ಪಿ ದೀಪನ್ ಎಂ.ಎನ್.ಅವರಿಗೆ ದೂರು ನೀಡಿದ್ದಾರೆ.
ಕಾರವಾರ ಅರ್ಬನ್ ಬ್ಯಾಂಕ್ ಪರವಾನಗಿಯನ್ನು ರದ್ದು ಮಾಡಿ ಆರ್‌ಬಿಐ ಆದೇಶ ಹೊರಡಿಸಿದ್ದು, ಲಿಕ್ವಿಡೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸುವAತೆ ಸಹಕಾರ ಸಂಘಗಳ ಇಲಾಖೆಗೆ ನಿರ್ದೇಶನ ನೀಡಿದೆ. ಬ್ಯಾಂಕ್‌ನ ಠೇವಣಿಗೆ ಡಿಜಿಐಸಿಯಿಂದ ಇನ್ಶುರೆನ್ಸ್ ಪಾವತಿಯಾಗಲಿದೆ ಎಂದು ತಿಳಿಸಿದೆ. ಈ ವಿಷಯ ಗುರುವಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ನ್ಯಾಯ ಕೇಳಿದ್ದರು. ಆದರೆ, ಸರಿಯಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಎಸ್‌ಪಿ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು.
ಬ್ಯಾಂಕ್‌ಗೆ ಇದುವರೆಗೆ ೩,೬೭೦ ಜನರು ಇದುವರೆಗೂ ತಮ್ಮ ಠೇವಣಿ ವಾಪಸಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ೧೫೮೮ ಜನರ ೩೭.೫೦ ಕೋಟಿ ರೂ. ಠೇವಣಿಯನ್ನು ಡಿಪಾಸಿಟ್ ಇನ್ಶುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಮರುಪಾವತಿ ಮಾಡಿದೆ. ಇನ್ನು ೨೦೮೨ ಜನರ ಸಾಕಷ್ಟು ಠೇವಣಿ ಪಾವತಿ ಬಾಕಿ ಇದ್ದು, ಸಿಬಿಎಸ್ ಮತ್ತು ಸ್ಟಾಚುಟರಿ ಆಡಿಟ್ ಆಗಬೇಕು ಎಂದು ಡಿಐಸಿಜಿಸಿ ಹೇಳಿತ್ತು. ಈ ಆಡಿಟ್ ವರದಿ ಡಿಐಸಿಜಿಸಿ ತಲುಪಿ ೫ ತಿಂಗಳು ಕಳೆದರೂ ಇದುವರೆಗೂ ಠೇವಣಿ ಮರುಪಾವತಿಯಾಗುತ್ತಿಲ್ಲ. ಇನ್ನು ಎಷ್ಟೇ ಠೇವಣಿ ಇದ್ದರೂ ೫ ಲಕ್ಷದವರೆಗಿನ ಠೇವಣಿ ಮಾತ್ರ ಡಿಐಸಿಜಿಸಿ ಠೇವಣಿ ಮರುಪಾವತಿ ಮಾಡುತ್ತಿದೆ.
ಬ್ಯಾಂಕ್‌ನ ಅಧ್ಯಕ್ಷರು, ನಿರ್ದೇಶಕರು, ಉದ್ಯೋಗಿಗಳು ನಮ್ಮೆಲ್ಲರ ಬಳಿ ಸುಳ್ಳು ಹೇಳಿ ಠೇವಣಿದಾರರಿಗೆ ಮೋದ ಮಾಡಿದ್ದಾರೆ. ಅವರೆ ಮೇಲೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಎಸ್‌ಪಿ ದೀಪನ್ ಭರವಸೆ ನೀಡಿದರು.