

ಕಾರವಾರ: ಆರ್ಥಿಕ ವರ್ಷದಲ್ಲಿ ಅಂಚೆ ಸಾಮಾನ್ಯ ಸೇವೆಗಳ ಕೇಂದ್ರಗಳ ವ್ಯವಹಾರಗಳಲ್ಲಿ ಕಾರವಾರ ಅಂಚೆ ವಿಭಾಗವು ರಾಜ್ಯ ವೃತ್ತದಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
2023-24 ನೇ ಸಾಲಿನಲ್ಲಿ ಸುಮಾರು 1.36 ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಅಂಚೆ ವಿಭಾಗ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಒಟ್ಟು ಮೂರು ಪ್ರಶಸ್ತಿಗಳು ಲಭಿಸಿವೆ. ನಿವ್ವಳ ಖಾತೆ ಗಳ ಸಂಖ್ಯೆಯ ವಿಭಾಗದಲ್ಲಿ ಹೊನ್ನಾವರ ಅಂಚೆ ನಿರೀಕ್ಷಕ ಕೆ.ಎಚ್. ಸಂಕರಟ್ಟಿ ಅವರು ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ. ಅಂಚೆ ಕಚೇರಿಯ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಗಳನ್ನು ತೆರೆಯುವ ವಿಭಾಗದಲ್ಲಿ ಹೊನ್ನಾವರ ಅಂಚೆ ಕಚೇರಿಯ ಅಂದಿನ ಅಂಚೆ ಪಾಲಕಿ ಅಂಕಿತಾ ಗೋವೆಕರ್ ದ್ವಿತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ವಿತರಿಸಿದರು. ಈ ಸಮಾರಂಭದಲ್ಲಿ ಕರ್ನಲ್ ಸುಶೀಲ್ ಕುಮಾರ್ ಉತ್ತರ ಕರ್ನಾಟಕ ಪಿಎಂಜಿ , ಎಲ್.ಕೆ. ದಾಸ್ ಬೆಂಗಳೂರು ಪಿಎಂಜಿ, ಡಾ. ಚಂದ್ರಶೇಖರ ಕಾಕುಮಾನ್ ದಕ್ಷಿಣ ಕರ್ನಾಟಕ ಪಿಎಂಜಿ, ಕೈಯಾ ಆರೋರ, ಬೆಂಗಳೂರು ಅಂಚೆ ನಿರ್ದೇಶಕ, ಸಂದೇಶ ಮಹಾದೇವಪ್ಪ, ದಕ್ಷಿಣ ಕರ್ನಾಟಕ ಅಂಚೆ ನಿರ್ದೇಶಕಿ ವಿ.ತಾರಾ,ಉತ್ತರ ಉಪಸ್ಥಿತರಿದ್ದರು ಎಂದು ಆಚಾರ್ ಅವರು ತಿಳಿಸಿದ್ದಾರೆ.