ನಾಗರಿಕರ ಅಹವಾಲು ಆಲಿಸಲು ನಗರಸಭೆಯಿಂದ ಆಪ್‌

CMC Meeting
Published on

ಕಾರವಾರ: ನಾಗರಿಕರ ಸಮಸ್ಯೆ ಆಲಿಸಲು ಬಿಬಿಎಂಪಿ ಮಾದರಿಯಲ್ಲಿ ಸಹಾಯ 2.0 ಆ್ಯಪ್ ಪ್ರಾರಂಭಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ತಿಳಿಸಿದರು.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಭಾರತದ ಸ್ವಚ್ಛ ನಗರ ಎಂದು ಪ್ರಸಿದ್ಧವಾದ ಇಂದೋರ್‌ಗೆ ಸದಸ್ಯರ ಜತೆ ಭೇಟಿ ನೀಡಿ ಬಂದ ನಂತರ ಅದೇ ಮಾದರಿಯಲ್ಲಿ ಆ್ಯಪ್ ಸಿದ್ಧಪಡಿಸಲಾಗಿದೆ. ಜಿಪಿಎಸ್ ಲೊಕೇಶನ್‌ನೊಂದಿಗೆ ನಾಗರಿಕರು ಆ್ಯಪ್‌ನಲ್ಲಿ ದೂರು ನೀಡಬಹುದು.

ದೂರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗೆ ರವಾನೆಯಾಗಲಿದೆ. ನಾಗರಿಕರು, ಫೋಟೋ, ವಿಡಿಯೋ ಮತ್ತು ವೈಸ್ ಮೆಸೇಜ್‌ಗಳನ್ನೂ ಹಾಕಬಹುದು. ಆ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಬಗೆಹರಿಸದಿದ್ದರೆ ಮೇಲಧಿಕಾರಿಗಳಿಗೆ ಮಾಹಿತಿ ಹೋಗಲಿದೆ. ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಿದ ಬಗ್ಗೆ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕಿದೆ ಎಂದರು.

ಮೀನು ಮಾರುಕಟ್ಟೆ ಸ್ವಚ್ಛವಾಗಿಡಿ:

ನಗರದ ಮೀನು ಮಾರುಕಟ್ಟೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಹಿಳೆಯರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರಾದ ಪ್ರೇಮಾನಂದ ಗುನಗಾ, ಉಲ್ಲಾಸ ಕೇಣಿ,ಡಾ. ನಿತಿನ್ ಪಿಕಳೆ ಇತರರು ಒತ್ತಾಯಿಸಿದರು. ನಗರಸಭೆ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಎಲ್ಲ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಉಪಾಧ್ಯಕ್ಷೆ ಪ್ರೀತಿ ಮಧುಕರ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net