

ಕಾರವಾರ: ಬಾಲಿವುಡ್ ಸಿನಿಮಾವೊಂದರಲ್ಲಿ ಕಾರವಾರದ ಯುವ ಪ್ರತಿಭೆ ವಿಪುಲ್ ಡಿ.ಪೆಡ್ನೇಕರ್ ಕಾರ್ಯನಿರ್ವಹಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ರೋಕಿ ಔರ್ ರಾಣಿ ಕಿ ಪ್ರೇಮ್ ಕನಾನಿ'ಯಲ್ಲಿ ರಾಹುಲ್ ತಿವಾರಿ ಅವರ ಜತೆಗೂಡಿ ವಿಪುಲ್ ಪೆಡ್ನೇಕರ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ರಚಿಸಿದ್ದಾರೆ.
ವಿಪುಲ್ ಸದಾಶಿವಗಡ ಮೂಲದದವರು. ಇಲ್ಲಿಯೇ ಓದಿ, ಬೆಳೆದು, ಸ್ವಂತ ಬ್ಯಾಂಡ್ ತೆರೆದು ವಿವಿಧೆಡೆ ಕಾರ್ಯಕ್ರಮವನ್ನೂ ನೀಡಿದ್ದರು.
"ನನಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ನಾನು 6 ನೇ ತರಗತಿಯಲ್ಲಿದ್ದಾಗಲೇ ನನ್ನ ಅಪ್ಪ ತಬಲಾ ತರಗತಿಗೆ ಸೇರಿಸಿದರು. ನಂತರ 10 ನೇ ತರಗತಿಯ ಹೊತ್ತಿಗೆ ಸ್ಥಳೀಯ ರಿದಂ ಹಾರ್ಟ್ ಬೀಟ್‌ನಲ್ಲಿ ಗಿಟಾರ್ ತರಗತಿ ಸೇರಿದೆ.
ನಂತರ ನೃತ್ಯ ನಿರ್ದೇಶಕ ವಿಜಯೇಂದ್ರ ಕುಮಾರೇಶ ಅವರ ಸಹಕಾರದಲ್ಲಿ ಬ್ಯಾಂಡ್ ಸಿದ್ಧ ಮಾಡಿದೆ. ಕಾರವಾರ ಕರಾವಳಿ ಉತ್ಸವ ಸೇರಿದಂತೆ ವಿವಿಧೆಡೆ ಕಾರ್ಯಕ್ರಮವನ್ನೂ ನೀಡಿದ್ದೇನೆ.
ಸಂಗೀತದಲ್ಲೇ ಭವಿಷ್ಯ ಕಂಡುಕೊಳ್ಳುವ ಉದ್ದೇಶದಿಂದ ಮುಂಬೈಗೆ ಬಂದು ರಾಹುಲ್ ತಿವಾರಿ ಅವರ ಜತೆ ಸ್ಟುಡಿಯೋದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ" ಎನ್ನುತ್ತಾರೆ ವಿಪುಲ್ ಪೆಡ್ನೇಕರ್.