

ಕಾರವಾರ: ಇಲ್ಲಿನ ಬಾಡ ಗ್ರಾಮದ ಬಂಡಿ ಹಬ್ಬವು ಮೇ 9 ರಂದು ಜರುಗಲಿದೆ. ಕಾರವಾರ ಬಂಡಿ ಹಬ್ಬ ಎಂದು ಇದು ಪ್ರಸಿದ್ಧವಾಗಿದೆ. ಅಕ್ಷಯ ತೃತೀಯ ದಿನದಿಂದ ಕಾಂಚಿಕಾ ಪರಮೇಶ್ವರಿ ದೇವರ ಕಳಶ ಸಂಚಾರ ನಗರದೆಲ್ಲೆಡೆ ನಡೆದಿದೆ. ಮೇ 9 ರಂದು ಕಳಶವು ಕಲಶ ದೇವಸ್ಥಾನದಿಂದ ಶೆಬಿ ದೇವಸ್ಥಾನಕ್ಕೆ ಹೊರಡಲಿದೆ. ಬೆಳಗ್ಗೆ 8.30 ರಿಂದ 1 ಗಂಟೆಯವರೆಗೆ ಗಿಂಡಿ ತುಂಬುವುದು ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 3 ಗಂಟೆಗೆ ಕಲಶವು ಗ್ರಾಮ ದೇವಸ್ಥಾನಕ್ಕೆ ಹೊರಡುವುದು. ರಾತ್ರಿ 8 ಗಂಟೆಗೆ ದೇವರು ಗ್ರಾಮ ದೇವಸ್ಥಾನದಿಂದ ರಾಟೆ ಕಟ್ಟೆಗೆ ಹೊರಡುವುದು. ಅಲ್ಲಿ ದೇವರನ್ನು ಬಂಡಿ(ರಾಟೆ)ಯ ಮೇಲೆ ಕೂರಿಸಿ ತಿರುಗಿಸುವ ಬಂಡಿ ಹಬ್ಬ ನಡೆಯಲಿದೆ.
ಮೇ 10 ರಂದು ಬೆಳಗ್ಗೆ 8 ಗಂಟೆಯಿAದ 12 ರವರೆಗೆ ಕಳಸ ದೇವಸ್ಥಾನದಲ್ಲಿ ಗಿಂಡಿ ಮತ್ತು ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ. 3 ಗಂಟೆಗೆ ದೇವರು ಕಳಸ ದೇವಸ್ಥಾನದಿಂದ ಗಣಪತಿ ದೇವಸ್ಥಾನದ ಮಾರ್ಗವಾಗಿ ದೇವತಿ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಗ್ರಾಮ ದೇವರ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವುದರೊಂದಿಗೆ ಬಂಡಿ ಹಬ್ಬ ಮುಕ್ತಾಯವಾಗಲಿದೆ.