

ಸಿಂಧನೂರು: ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಮುಂಭಾಗದಲ್ಲಿ ಪತ್ತೆಯಾದ ಅನಾಥ ಮಗುವನ್ನು ಬುಧವಾರ ರಾಯಚೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಅನಾರೋಗ್ಯದ ಸ್ಥಿತಿಯನ್ನು ಕಂಡು ಗಂಡು ಮಗುವಿಗೆ ಆಶ್ರಮ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಸಿಂಧನೂರಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗೆ ಮಾಹಿತಿ ನೀಡಿ ಅವರ ಮುಖಾಂತರ ರಾಯಚೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಒಪ್ಪಿಸಿದೆ.
ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವಸ್ವಾಮಿ ಹಿರೇಮಠ, ಕಳೆದ ಕೆಲವು ದಿನಗಳ ಹಿಂದೆ ಅನಾಥ ಮಗು ಪತ್ತೆಯಾಗಿತ್ತು. ಆಶ್ರಮದಲ್ಲಿ ಆಶ್ರಯ ನೀಡಿದ್ದವು. ಈಗ ರಾಯಚೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಒಪ್ಪಿಸಲಾಗಿದೆ ಎಂದರು.
ಸಿಂಧನೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಿರಿಯ ಮೇಲ್ವಿಚಾರಕಿ ರೇಣುಕಾ ಮಡಿವಾಳ, ಮಕ್ಕಳ ರಕ್ಷಣೆ ನಿರ್ದೇಶನಾಲಯದ ಸಂಯೋಜಕಿ ಶಿಲ್ಪಾ, ಸಿಬ್ಬಂದಿ ಸುನೀತಾ, ರಜಿಯಾ, ಆಶ್ರಮದ ಮಾರ್ಗದರ್ಶಕರಾದ ಗುರುರಾಜ ಮುಕ್ಕುಂದ, ಡಾ. ಚನ್ನಬಸವಸ್ವಾಮಿ ಹಿರೇಮಠ, ಶರಣಮ್ಮ, ಮರಿಯಪ್ಪ ಇದ್ದರು.