ಕರುನಾಡಿನ ಅಸ್ಮಿತೆಯ ಹಬ್ಬ ‘ರಾಜ್ಯೋತ್ಸವ’

NAREGAL FLAG
ನರೇಗಲ್ಲ ಪ.ಪಂ ಸಭಾ ಭವನದಲ್ಲಿ ಮಂಗಳವಾರ ಕನ್ನಡ ಧ್ವಜಗಳನ್ನು ವಿತರಿಸಲಾಯಿತು. ಫಕೀರಪ್ಪ ಮಳ್ಳಿ, ಕುಮಾರಸ್ವಾಮಿ ಕೋರಧಾನ್ಯಮಠ, ಎಂ.ಎಸ್. ದಡೆಸೂರಮಠ, ಮುತ್ತಪ್ಪ ನೂಲ್ಕಿ, ಮಹಾದೇವ ಬೇವಿನಕಟ್ಟಿ ಇತರರು ಇದ್ದರು.
Published on

ನರೇಗಲ್ಲ: ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಒಂದು ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿ ಅವರು ಮಾತನಾಡಿದರು.

ನರೇಗಲ್ಲ: ಕನ್ನಡ ರಾಜೋತ್ಸವವು ಕನ್ನಡ ನಾಡಿನ ಅಸ್ಮಿತೆಯ ಹಬ್ಬವಾಗಿದೆ. ಕನ್ನಡ ರಾಜ್ಯೋತ್ಸವವನ್ನು ವಿಧಾಯಕವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಒಂದು ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟಚಾಗಿ ಆಚರಿಸಲಾಗುತ್ತದೆ. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಮನೆ-ಮನೆಗೆ ಕನ್ನಡ ಬಾವುಟಗಳನ್ನು ವಿತರಿಸಲಾಗುತ್ತಿದೆ. ರಾಜ್ಯೋತ್ಸವ ದಿನ ಮನೆ-ಮನೆಗಳ ಮೇಲೆ ಬಾವುಟ ಹಾರಿಸಲಾಗುತ್ತದೆ ಎಂದರು.

ನಿವೃತ್ತ ಶಿಕ್ಷಕ ಎಂ.ಎಸ್. ದಡೆಸೂರಮಠ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ. ಭಾಷಾಭಿಮಾನ ಎಲ್ಲರಲ್ಲಿ ಮೂಡಬೇಕಿದೆ. ಎಲ್ಲರೂ ಕನ್ನಡತನವನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.

ಕುಮಾರಸ್ವಾಮಿ ಕೊರಧಾನ್ಯಮಠ. ಮುತ್ತಪ್ಪ ನೂಲ್ಕಿ, ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಮಹಾದೇವ ಬೇವಿನಕಟ್ಟಿ, ಬಸವರಾಜ ಕುರಿ, ಈಶ್ವರ ಬೆಟಗೇರಿ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ವೀರಪ್ಪ ಜೋಗಿ, ನಿಂಗಪ್ಪ ಚಲವಾದಿ, ಕಳಕನಗೌಡ ಪಾಟೀಲ, ಅಲ್ಲಭಕ್ಷಿ ನದಾಫ್, ಗುಡದಪ್ಪ ಗೋಡಿ, ಶೇಖಪ್ಪ ಕೆಂಗಾರ, ಸಕ್ರಪ್ಪ ಹಡಪದ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಶಂಕ್ರಪ್ಪ ದೊಡ್ಡಣ್ಣವರ, ವಿ.ವೈ. ಮಡಿವಾಳರ, ರಮೇಶ ಹಲಗಿ, ಎಂ.ಎಚ್. ಸೀತಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net