ಕರುನಾಡ ಕೋಗಿಲೆ

IMG-20230826-WA0020.jpg
Published on

ಹುಬ್ಬಳ್ಳಿ: ನಾರ್ಥ ಕರ್ನಾಟಕ ವುಮೆನ್ಸ್ ಫೌಂಡೇಷನ್, ಸ್ವರಧಾರ ಉದಯೋನ್ಮುಖ ಕಲಾವಿದರ ಹಾಗೂ ಗಾಯಕರ ಮಹಾ ಸಂಘದ ಸಹಯೋಗದಲ್ಲಿ ಕರುನಾಡ ಕೋಗಿಲೆ ಸೀಸನ್ 1 ಕಾರ್ಯಕ್ರಮವನ್ನು ಇಲ್ಲಿಯ ಅಶೋಕನಗರದ ಕನ್ನಡ ಭವನದಲ್ಲಿ ಆ. 27ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಉದ್ಘಾಟನೆ ನೆರವೇರಿಸುವರು. ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸುವರು. ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಕುಬಸದ, ಸ್ವರಧಾರ ಅಧ್ಯಕ್ಷೆ ಪ್ರೇಮಲತಾ ಹದ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net