ಇಂದಿನಿಂದ ಕಾರ್ತಿಕೋತ್ಸವ ಆರಂಭ

danammadevi
ಗುಡ್ಡಾಪುರ ದಾನಮ್ಮದೇವಿ
Published on

ಗುಡ್ಡಾಪುರ: ಮಹಾರಾಷ್ಟದ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ನ.29 ರಿಂದ ಡಿ.2ರ ವರೆಗೂ ಜಾತ್ರಾ ಮಹೋತ್ಸವ ನಡೆಯಲಿದೆ.

ನ.29 ರಂದು ಬೆಳಗ್ಗೆ 10 ಗಂಟೆಗೆ ಗುಡ್ಡಾಪುರ ಹಿರೇಮಠದ ಗುರುಪಾದ ಶಿವಾಚಾರ್ಯರು ಹಾಗೂ ಗೌಡಗಾಂವ ಹಿರೇಮಠದ ಡಾ. ಜಯಸಿದ್ಧೇಶ್ವರ ಶಿವಾಚಾರ್ಯರು ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ನ.30 ರಂದು ಕಾರ್ತಿಕ ಅಮಾವಾಸ್ಯೆ ನಿಮಿತ್ತ ಸಂಜೆ 8ಕ್ಕೆ ವಿಶ್ವ ಪ್ರಸಿದ್ಧ ಕಾರ್ತಿಕ ದೀಪೋತ್ಸವ ನಡೆಯಲಿದೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸ್ಥಳೀಯ ಹಿರೇಮಠದ ಗುರುಪಾದ ಶಿವಾಚಾರ್ಯರು, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಾರ್ತಿಕೋತ್ಸವ ನಡೆಯಲಿದೆ.

ಡಿ.1 ರಂದು ಸಂಜೆ 5ಕ್ಕೆ ದಾನಮ್ಮದೇವಿಯ ಬೃಹತ್ ರಥೋತ್ಸವಕ್ಕೆ ಬುರಾಣಪುರ ಸಿದ್ದಾರೂಠ ಮಠದ ಪರಮಪೂಜ್ಯಯ್ಯನಿ ಯೋಗೇಶ್ವರಿ ಮಾತಾಜಿ, ಸ್ಥಳೀಯ ಹಿರೇಮಠದ ಗುರುಪಾದ ಶಿವಾಚಾರ್ಯರು ಚಾಲನೆ ನೀಡಲಿದ್ದಾರೆ.

ನೂತನವಾಗಿ ಶಾಸಕರಾಗಿ ಆಯ್ಕೆಯಾದ ಸೊಲ್ಲಾಪುರದ ವಿಜಯಕುಮಾರ ದೇಶಮುಖ್, ಜತ್ ಶಾಸಕ ಗೋಪಿಚಂದ ಪಡಳಕರ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.

ಪಾದಯಾತ್ರೆ ಕಮೀಟಿ, ಸಮಸ್ತ ಗುಡ್ಡಾಪುರ ಗ್ರಾಪಂ ಸರ್ವ ಸದಸ್ಯರು, ಅಧ್ಯಕ್ಷರು, ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷರು, ಸರ್ವ ಆಡಳಿತ ಮಂಡಳಿ ಸಮಸ್ತ ಭಕ್ತ ಸಮೂಹ ಹಾಗೂ ದೇವಸ್ಥಾನದ ವಾರ್ತಾಧಿಕಾರಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net