

ಕೊಳವಿ: ಸಮೀಪದ ಬೆಣಚಿನಮರಡಿ(ಕೋ) ಗ್ರಾಮದಲ್ಲಿ ಸಂಭ್ರಮದಿಂದ ಮಾರುತಿ ಸೇರಿ ಎಲ್ಲ ದೇವರ ಕಾರ್ತಿಕೋತ್ಸವ ಮಂಗಳವಾರ ಸಂಪನ್ನವಾಯಿತು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮಂಗಳವಾರ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕಾರ್ತಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಜಾತ್ರೋತ್ಸವ ಹಾಗೂ ಕಾರ್ತಿಕೋತ್ಸವ ಪ್ರಯುಕ್ತ ಕುದುರೆ ಶರ್ಯತ್ತು, ಟಗರಿನ ಕಾಳಗ ಎತ್ತಿನ ಬಂಡೆ ಹಾಗೂ ನಾಟಕ ಆಯೋಜಿಸಿದ್ದು ಸ್ಮರಣೀಯ ಎಂದರು. ಗ್ರಾಮಸ್ಥರು ಲಖನ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಶಿವಾನಂದ ಪೂಜೇರಿ, ಲಕ್ಕಪ್ಪ ಮಾಳಗಿ, ಮುತ್ತಪ್ಪ ಬೀರನಗಡ್ಡಿ, ರಂಗಪ್ಪ ರಂಗನ್ನವರ, ಸಿದ್ದಪ್ಪ ಪೂಜೇರಿ, ಲಗಮನಗೌಡ ಪಾಟೀಲ, ಮಾರುತಿ ಜಿಂಗಿ, ರಾಮೋಜಿ ಮಾಳಗಿ, ಲಕ್ಷ$್ಮಣ ಜಿಂಗಿ, ವಿಠ್ಠಲ ಗುಂಡಿ ಇತರರಿದ್ದರು.