

ಕೆರೂರ: ಪಟ್ಟಣದ ನೆಹರು ನಗರದ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.
ಈ ನಿಮಿತ್ತ ದೇವಸ್ಥಾನ, ಆವರಣ ಸ್ವಚ್ಛಗೊಳಿಸಲಾಗಿತ್ತು. ಬೆಳಗ್ಗೆ ಮಾರುತೇಶ್ವರ ದೇವರಿಗೆ ಎಲೆ ಪೂಜೆ, ವಿವಿಧ ವಿಶೇಷ ಪೂಜೆ ಅಭಿಷೇಕ ನೆರವೇರಿಸಲಾಯಿತು.
ಸಂಜೆ ನೂರಾರು ಭಕ್ತರು ಹಣತೆಗಳ ದೀಪ ಹಚ್ಚಿ ಸಂಭ್ರಮಿಸಿದರು.
ಮಕ್ಕಳು ಮತ್ತು ಭಕ್ತರು ಆಂಜನೇಯ ಹಾಗೂ ಶ್ರೀ ರಾಮನ ಕುರಿತು ಭಕ್ತಿಗೀತೆ ಹಾಡಿದರಲ್ಲದೆ, ಭಜನೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ದೇವಸ್ಥಾನವನ್ನು ತಳಿರು ತೋರಣ ಮತ್ತು ಹೂಗಳಿಂದ ಅಲಂಕರಿಸಿದ್ದರು.
ಅಯಪ್ಪಸ್ವಾಮಿ ದೇವಾಂಗಮಠ ಮಾಹಾಮಂಗಳಾರತಿ ನೆರವೇರಿಸಿದರು. ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಕಾಂತು ಹಳಕಟ್ಟಿ, ಕೃಷ್ಣಾ ಗದ್ದನಕೇರಿ, ಪ್ರೇಮನಾಥ ಬೀಳಗಿ, ಬಸವರಾಜ ತಂಬೂರಿ, ವಿಶ್ವನಾಥ ಕಠಾರಿ, ಕೃಷ್ಣಾ ನರಸನ್ನವರ, ಸಚಿನ್ ಯಂಡಿಗೇರಿ, ಆನಂದ ಶಾಲದಾರ, ಅಶೋಕ ತೆಗ್ಗಿ, ಪ್ರವೀಣ್ ಮಲ್ಲಾಪೂರ, ಮನೋಜ ರಾಮದುರ್ಗ ಸೇರಿ ಅಪಾರ ಭಕ್ತರು ಪಾಲ್ಗೊಂಡಿದ್ದರು.