

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಗುರು ಗಡ್ಡದೇವರಮಠದಲ್ಲಿ ಡಿ.1 ರಂದು ಸಂಜೆ 6.30ಕ್ಕೆ ಮಠದ ಆವರಣದಲ್ಲಿ ಕಾರ್ತಿಕೋತ್ಸವ ನೆರವೇರಲಿದೆ ಎಂದು ಶ್ರೀಮಠದ ವಂಶಸ್ಥ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಈ ಕುರಿತು ಬುಧವಾರ ಗುರು ಗಡ್ಡದೇವರಮಠದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀಮಠವು ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿದ್ದು ಈ ಭಾಗದ ಜನರ ಶ್ರದ್ಧಾ ಕೇಂದ್ರವಾಗಿದೆ’ ಎಂದರು.
ದೀಪೋತ್ಸವದ ನಂತರ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಜರುಗುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ವಹಿಸಲಿದ್ದಾರೆ. ಲಕ್ಷ್ಮೇಶ್ವರದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಕೊತಬಾಳದ ರಾಚಯ್ಯ ಅವರ ತಂಡ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ತಂಡದಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ ಎಂದರು.
ಬಸವರಾಜ ಬೆಂಡಿಗೇರಿ, ರಾಜೀವ ಕುಂಬಿ, ಪದ್ಮರಾಜ ಪಾಟೀಲ, ಜಯಕ್ಕ ಕಳ್ಳಿ, ಈರಣ್ಣ ಅಂಕಲಕೋಟಿ, ಬಾಬಣ್ಣ ಅಳವಂಡಿ, ವಿರೂಪಾಕ್ಷಪ್ಪ ಪಡಗೇರಿ, ರಮೇಶ ಗಡದವರ, ಕಿರಣ ನವಲೆ, ಶಿವಜೋಗೆಪ್ಪ ಚಂದರಗಿ, ಮಹೇಶ ಲಿಂಬಯ್ಯ ಸ್ವಾಮಿಮಠ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪುರ, ಸಾಹೇಬಜಾನ ಹವಾಲ್ದಾರ, ವಿರೂಪಾಕ್ಷಪ್ಪ ಆದಿ, ಶಿವಯೋಗಿ ಗಡ್ಡದೇವರಮಠ, ಶೇಖಪ್ಪ ಹುರಕಡ್ಲಿ, ಮಲ್ಲಯ್ಯ ಭಕ್ತಿಮಠ, ಫಕೀರೇಶ ನಂದೆಣ್ಣವರ, ವೆಂಕಟೇಶ ಮಾತಾಡೆ, ಪ್ರಕಾಶ ಕೊಂಚಿಗೇರಿಮಠ, ಮಲ್ಲನಗೌಡ ಪಾಟೀಲ, ಸಿದ್ದು ದುರಗಣ್ನವರ ಇತರರು ಇದ್ದರು.