ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

30082022 msk veerbhadra
Published on

ಬೈಲಹೊಂಗಲ: ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಅಪಾರ ಭಕ್ತರ ಮಧ್ಯೆ ಮಂಗಳವಾರ ವಿಜಂಭಣೆಯಿಂದ ಜರುಗಿತು. ಭಕ್ತರು ದೀಪ ಬೆಳಗಿಸಿ, ದೇವರಿಗೆ ನಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ದೇವಸ್ಥಾನ ದೀಪಗಳ ಅಲಂಕಾರದಿಂದ ಕಂಗೊಳಿಸಿತು. ಶ್ರೀ ವೀರಭದ್ರೇಶ್ವರನಿಗೆ ವಿಶೇಷ ಪೂಜೆ, ಅರ್ಚಕ ವೀರೇಶ ಮಠಪತಿ ಕೈಗೊಂಡ ವಿವಿಧ ಪುಷ್ಪಗಳ ಅಲಂಕಾರ ಗಮನ ಸೆಳೆಯಿತು. ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿತು. ಭಗಳಾಂಬಾದೇವಿ ದೇವಸ್ಥಾನದ ವೀರಯ್ಯ ಸ್ವಾಮೀಜಿ, ವಿಶ್ವನಾಥ ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ, ಶಿವರಂಜನ ಬೋಳನ್ನವರ, ದೇವಸ್ಥಾನ ಕಮಿಟಿ ಅಧ್ಯಕ್ಷ ರಾಜಣ್ಣ ಸಂಗೊಳ್ಳಿ,

ಕಾರ್ಯದರ್ಶಿ ಜಗದೀಶ ಲೋಕಾಪುರ, ಸದಸ್ಯರಾದ ರವೀಂದ್ರ ಕರ್ಕಿ, ಈಶ್ವರ ಚಿನಗುಡಿ, ಚನ್ನಪ್ಪ ಮಹಾಂತಶೆಟ್ಟಿ, ಶಿವಾನಂದ ವಾಲಿ, ಈರಣ್ಣ ಶೆಟ್ಟರ, ಸೋಮಶೇಖ ಕೊತಂಬ್ರಿ, ಅನಿಲ ಮೆಟಗುಡ್ಡ, ಶಿವಕುಮಾರ ಹಂಪನ್ನವರ, ಭಕ್ತರಾದ ಈರಪ್ಪ ಬಡ್ಡಿಮನಿ, ಮಹಾಂತೇಶ ಕಳ್ಳಿಬಡ್ಡಿ, ದೊಡ್ಡವೀರಪ್ಪ ಕಾದ್ರೋಳ್ಳಿ, ಪುರವಂತರಾದ ಮಲ್ಲನಗೌಡ ಪಾಟೀಲ, ಕಾಳಪ್ಪ ಬಡಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net