

ಮೈಸೂರು: ಅಜ್ಜನಮನೆ ಕಲಾ ಪ್ರಪಂಚ ಸಂಸ್ಥೆ ವತಿಯಿಂದ ನ.6 ರಂದು ರಮಾಗೋವಿಂದ ರಂಗಮಂದಿರದಲ್ಲಿ ಮಕ್ಕಳೇ ನಡೆಸಿಕೊ ಡುವ ಸೂರ್ಯೋದಯದಿಂದ ಚಂದ್ರೋದಯದವರೆಗಿನ ‘ಕಾರ್ತಿಕ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಕೃಷ್ಣ ತಿಳಿಸಿದರು.
ಕಾರ್ಯಕ್ರಮಕ್ಕೆ ಬೆಳಗ್ಗೆ 6.15ಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 7.15ರವರೆಗೆ ನಡೆಯಲಿದೆ. ಒಟ್ಟು 12 ಗಂಟೆಗಳ ಕಾಲ ಕಾರ್ಯ ಕ್ರಮ ನಡೆಯಲಿದ್ದು, ಒಟ್ಟು 12 ಶಾಲೆಗಳ 152 ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ವಾನ್ ಕೃಷ್ಣಮೂರ್ತಿ ಶಿಷ್ಯರಿಂದ ಮಂಗಳವಾದ್ಯ, ಡಾ. ಶ್ರೀಶಾ ಭಟ್ ಶಿಷ್ಯರಿಂದ ಚಂಡೆವಾದನ, ಡಾ. ಕೃಪಾಫಡ್ಕೆ ಶಿಷ್ಯರಿಂದ ಭರತನಾಟ್ಯ, ಅಮ್ಮ ರಾಮಚಂದ್ರ ನೇತೃತ್ವದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಜಾನಪದ ಗಾಯನ, ಕವಿತಾ ಧನಂಜಯ ಶಿಷ್ಯರಿಂದ ನಾಟಕ, ಗಾನಭಾರತಿತ ಕಲಾ ಶಾಲಾ ಮಕ್ಕಳಿಂದ ವಾದ್ಯವೃಂದ, ಸಂಧ್ಯಾ ಭಟ್ ಶಿಷ್ಯರಿಂದ ಹಿಂದೂಸ್ತಾನಿ ಸಂಗೀತ, ನಾಗಶ್ರೀ ಫಣಿ ಶಿಷ್ಯರಿಂದ ಜಾನಪದ ನೃತ್ಯ, ವಿ.ಎಸ್. ರಮೇಶ್ ಶಿಷ್ಯರಿಂದ ತಾಳವಾದ್ಯ, ರಂಗರಾವ್ ಸ್ಮಾರಕ ವಿಶೇಷ ಚೇತನ ವಿದ್ಯಾರ್ಥಿಗಳಿಂದ ಹಾಡು ಮತ್ತು ನೃತ್ಯ, ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಹಾಡುಗಾರಿಕೆ, ಇನ್‌ಸ್ಟಿಟ್ಯೂಟ್ ಆಫ್ ಮದರ್ ಆ್ಯಂಡ್ ಡೆಫ್ ಚೈಲ್ಡ್ ಶಾಲಾ ವಿದ್ಯಾರ್ಥಿಗಳಿಂದ ನಾಟಕ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ಸುಮಾ ಕೃಷ್ಣಮೂರ್ತಿ ಇದ್ದರು.