ಸೂಗೂರೇಶ್ವರ ಕಾರ್ತಿಕೋತ್ಸವ ಪ್ರಾರಂಭ

Untitled design(8)
ಶ್ರೀ ಸೂಗೂರೇಶ್ವರ ದೇವಸ್ಥಾನ ಮೂರ್ತಿ
Published on

ಅರಕೇರಾ: ಇಲ್ಲಿನ ಐತಿಹಾಸಿಕ ಸೂಗೂರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ ವಡವು, ವಚನ, ನಂದಿಕೋಲು ಸೇವೆ, ಪಲ್ಲಕ್ಕಿ ಸೇವೆ, ಅನ್ನ ಪ್ರಸಾದ ಜರುಗಲಿದೆ.

ನಂದಿಕೋಲು ಸೇವೆ, ಪಲ್ಲಕ್ಕಿ ಸೇವೆ, ಅನ್ನ ಪ್ರಸಾದ

ದೀಪಾವಳಿ ಪಾಡ್ಯದಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಮುಂಬರುವ ಛಟ್ಟಿ ಅಮವಾಸ್ಯೆ ಮುಗಿದ ಐದು ದಿನಗಳ ನಂತರ ಜಾತ್ರಾ ಮಹೋತ್ಸವ ನಡೆಯಲಿದೆ. ದೀಪೋತ್ಸವ, ಉತ್ಸವ, ರಥೋತ್ಸವ, ಕಡುಬಿನ ಕಾಳಗ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚಂದ್ರಶೇಖರಯ್ಯ ಸ್ವಾಮಿ ಸಾನ್ನಿಧ್ಯದಲ್ಲಿ ಜರುಗಲಿವೆ ಎಂದು ದೇವಸ್ಥಾನದ ಕಮಿಟಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net