

ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಿರುಪಾಪುರದ ಆರ್ಯ ವೈಶ್ಯ ಸಮಾಜದಿಂದ ಕಾರ್ತೀಕ ದೀಪೋತ್ಸವ ಮತ್ತು ವಿಶೇಷ ಪೂಜೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಚಂಪಾಷಷ್ಠಿ ನಿಮಿತ್ತ ಶ್ರೀ ಸುಬ್ರಮಣ್ಯೇಶ್ವರ ಮತ್ತು ಕನ್ನಿಕಾ ಮೂರ್ತಿಗೆ ವಿಶೇಷ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರುಗಿತು. ನಂತರ ಕಾರ್ತೀಕ ದೀಪೋತ್ಸವ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ನಿರಂತರ ಭಜನೆ ಜರುಗಿತು. ಚಂಪಾಷಷ್ಠಿ ವಿಶೇಷತೆ ಮತ್ತು ಧಾರ್ಮಿಕ ಸಭೆ ಕುರಿತು ಸಮಾಜದ ಅಧ್ಯಕ್ಷ ನಾಗರಾಜ ದರೋಜಿ ಮಾತನಾಡಿದರು.
ಮುಖಂಡರಾದ ಡಿ.ಮಲ್ಲಿಕಾರ್ಜುನ, ಗೋಪಾಲಶೆಟ್ಟಿ ಆನೆಗೊಂದಿ, ಡಿ.ವೆಂಕಟೇಶ, ರುಕ್ಮಿಣಿಬಾಯಿ ದಮ್ಮೂರ್, ಉಷಾ ಶಿರಿಗೇರಿ, ಜಿ.ರೇಖಾ ಸೇರಿ ವಾಸವಿ ಯುವಜನ ಸಂಘದ ಸದಸ್ಯರಿದ್ದರು.
ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ ಶ್ರೀ ವಲ್ಲಿ ದೇವಸೇನಾ ಸಮೇತ ಶ್ರೀ ಸುಬ್ರಮಣ್ಯೇಶ್ವರ ದೇವಾಲಯದಲ್ಲಿ ಚಂಪಾಷಷ್ಠಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿ ನಾಗಪೂಜೆ, ಪಲ್ಲಕ್ಕಿ ಮಹೋತ್ಸವ, ಕಲ್ಯಾಣೋತ್ಸವ, ಅಭಿಷೇಕ ಮತ್ತು ಪುಷ್ಪಯಾಗ ಹಮ್ಮಿಕೊಳ್ಳಲಾಗಿತ್ತು. ಮುಖಂಡ ರುದ್ದರಾಜುನಾಗರಾಜು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶ್ರೀರಾಮನಗರ ಸೇರಿ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.