ಶ್ರೀ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ

28 Dwd saibaba
Published on

ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಗುರುವಾರ ಸಂಭ್ರಮದ ದೀಪೋತ್ಸವ ಜರುಗಿತು. ಖ್ಯಾತ ಗುತ್ತಿಗೆಗಾರ ಬಿ.ಟಿ. ರೆಡ್ಡಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಅವರು ಸಾಯಿಬಾಬಾ ಮೂರ್ತಿಗೆ ಪೂಜೆ ಸಲ್ಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಜಿ.ಆರ್. ಹೊಂಗಲಮಠ, ಕಿರಣ ಶಾ, ಉದಯ ಶೆಟ್ಟಿ, ಸೌರಭ ಸಾಳಗಾಂವಕಕರ, ಜಯಶ್ರೀ ಶಿವಪೂಜಿ, ರಾಜು ದೇಸಾಯಿ, ಸಂತೋಷ ಮಹಾಲೆ, ನೂರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net