ಪುಳ್ಕೂರು ಕ್ಷೇತ್ರದಲ್ಲಿ ಕಾರ್ತಿಕ ಪೂಜಾ ಆಮಂತ್ರಣ ಬಿಡುಗಡೆ

amanthrana
Published on

ಕಾಸರಗೋಡು: ಮಧೂರು ಸನಿಹದ ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾರ್ತಿಕ ದೀಪೋತ್ಸವ ನ.2ರಂದು ಆರಂಭಗೊಂಡು ಡಿ.2ರವರೆಗೆ ಜರುಗಲಿದೆ. ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಬಿಡುಗಡೆಗೊಳಿಸಿದರು.

ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ರಾತ್ರಿ ಭಜನಾ ಸಂಕೀರ್ತನಾ ಸೇವೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಕ್ಷೇತ್ರದ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ, ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಇದ್ದರು.

ಆಮಂತ್ರಣ ಪತ್ರಿಕೆ ವಿತರಿಸಲು ತಂಡ ರಚಿಸಲಾಯಿತು. ಸಮಿತಿ ಉಪಾಧ್ಯಕ್ಷ ಕೃಷ್ಣ ಹೊಳ್ಳ ನೀರಾಳ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಹಳೆಮನೆ, ಕುಮಾರ್ ಕೆ.ಎಲ್.ಪೆರಿಯಡ್ಕ, ಜತೆ ಕಾರ್ಯದರ್ಶಿ ಗಣೇಶ್ ಭಂಡಾರಿ ಮಾಯಿಪ್ಪಾಡಿ, ಸದಸ್ಯರಾದ ಅರವಿಂದ ಶೆಟ್ಟಿ, ಸುರೇಶ ಶೆಟ್ಟಿ ಮಾಯಿಪ್ಪಾಡಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಡುವ, ಕಿಟ್ಟಣ್ಣ ಶೆಟ್ಟಿ ಬೇರ, ನಿತೀಶ್ ಆಳ್ವ ಪುಳ್ಕೂರು, ಸುಜಾತ ಶೆಟ್ಟಿ ಪುಳ್ಕೂರು, ವಾಣಿ ಶೆಟ್ಟಿ ಬೇರ, ಸುಜೇಶ್ ಶೆಟ್ಟಿ ನೀರಾಳ ಹಾಗೂ ಕಾರ್ಯಾಲಯದ ಸಹಾಯಕ ಚಂದ್ರಹಾಸ ಶೆಟ್ಟಿ ಪುಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net