ಕಾರ್ತಿಕ ಮಲ್ಲೂರ ಕಾರ್ಯ ಇತರರಿಗೆ ಮಾದರಿ

web3
ಇಂಚಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಪಗಡೆ ಪಂದ್ಯಾವಳಿಗೆ ಬಸವರಾಜ ಬಾಳೇಕುಂದರಗಿ ಚಾಲನೆ ನೀಡಿದರು. ಪೂರ್ಣಾನಂದ ಸ್ವಾಮೀಜಿ, ಮಹಾಂತೇಶ ಮತ್ತಿಕೊಪ್ಪ, ಕಾರ್ತಿಕ ಮಲ್ಲೂರ ಇತರರಿದ್ದರು.
Published on

ಬೈಲಹೊಂಗಲ: ಇಂದಿನ ಆಧುನಿಕತೆಯಲ್ಲಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿರುವ ಯುವ ಮುಖಂಡ ಕಾರ್ತಿಕ ಮಲ್ಲೂರ ಅವರ ಕಾರ್ಯ ಇತರರಿಗೆ ಮಾದರಿ ಎಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ಸಮೀಪದ ಇಂಚಲ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪವಾಡ ಬಸವೇಶ್ವರ ಯುವಕ ಮಂಡಳ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಪಗಡೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಆರೋಗ್ಯಕ್ಕೆ ಹೆಚ್ಚು ಸಹಕಾರಿ ಆಗಿವೆ ಎಂದರು.

ಇಂಚಲ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ರಾಜಮಹರಾಜರ ಕಾಲದಿಂದಲೂ ಪಗಡೆ ಆಟಕ್ಕೆ ಹೆಚ್ಚು ಮೌಲ್ಯ ಇದೆ ಎಂದರು. ಸೋಮೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರನ್ನು ಸತ್ಕರಿಸಲಾಯಿತು.

ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಮಾಜಿ ಚೇರ್ಮನ್ ಎಂ.ಎಸ್.ರಾಹುತನವರ, ಸಹಕಾರಿ ಸಂಘಗಳ ಅಪರ ನಿಬಂಧಕ ಎಂ.ಡಿ.ಮಲ್ಲೂರ, ತಾಪಂ ಮಾಜಿ ಸದಸ್ಯ ಎಂ.ಎಸ್.ರಾಯನಾಯ್ಕರ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ನಿರ್ದೇಶಕರಾದ ರಾಜು ಕುಡಸೋಮಣ್ಣವರ, ಅಶೋಕ ಬಾಳೇಕುಂದರಗಿ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಶ್ರೀಶೈಲ ಶರಣಪ್ಪನವರ, ಮಲ್ಲಪ್ಪ ಅಷ್ಟಗಿ, ಅದೃಶ್ಯಪ್ಪ ಕೋಟಬಾಗಿ, ರಾಮಚಂದ್ರ ಕಕ್ಕಯ್ಯನವರ, ಮಡಿವಾಳಪ್ಪ ಅಂಗಡಿ, ಸಿಪಿಐ ಶಿವಾನಂದ ಗುಡುಗನಟ್ಟಿ, ಅಬಕಾರಿ ನಿರೀಕ್ಷಕ ಬಸವರಾಜ ಕರವಿನಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net