

ಕಂಪ್ಲಿ: ಕತ್ತಲೆಯಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದು ದೀಪೋತ್ಸವದ ಉದ್ದೇಶವಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಪಿ.ಎಸ್.ಬಾಲಾಂಜನೇಯಲು ಹೇಳಿದರು.
ಪಟ್ಟಣದ ಯೋಗಿನಾರೇಯಣ ಯತೀಂದ್ರ ಬಲಿಜ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 7ನೇ ಮಹಾ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ತಿಕ ದೀಪೋತ್ಸವ ಜ್ಞಾನದ ಸಂಕೇತವಾಗಿದ್ದು, ಮನಸ್ಸಿಗೆ ಬೆಳಕಿನ ಆಶಾಭಾವ ಮೂಡಿಸುತ್ತದೆ. ಉತ್ತಮ ಆಚಾರ, ವಿಚಾರ ರೂಢಿಸಿಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.
ಬಲಿಜ ಸಂಘದ ತಾಲೂಕು ಅಧ್ಯಕ್ಷ ಕವಿತಾಳ್ ಬಸವರಾಜ ಮಾತನಾಡಿ, ಸಮುದಾಯದ ಜನರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಕಠಿಣ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಎನ್‌ಎಂಡಿಸಿ ನಿವೃತ್ತ ಜೆಒ ಬಿ.ಶ್ರೀರಾಮುಲು, ಪ್ರಮುಖರಾದ ಡಿ.ಪುಷ್ಪಲತಾ ಸತೀಶ, ವಿದ್ಯಾಶಿವಕುಮಾರ್ ಕವಿತಾಳ್, ಕೆ.ರಾಘವೇಂದ್ರ, ಇಂಗಳಗಿ ನಾರಾಯಣಪ್ಪ, ಅನಿಲ್, ಮಲ್ಲಿಕಾರ್ಜುನ, ಬಾಬಣ್ಣ, ಸಾವಿತ್ರಮ್ಮ, ವಿಜಯಲಕ್ಷ್ಮೀ ಇತರರಿದ್ದರು.