ಕರ್ತವ್ಯನಿರತ ಪಿಎಸ್‌ಐ ಹೃದಯಾಘಾತದಿಂದ ಸಾವು

2BK2
ಹೃದಯಾಘಾತದಿಂದ ಮೃತಪಟ್ಟ ಮಂಠಾಳ ಠಾಣೆ ಕ್ರೆÊಂ ಪಿಎಸ್‌ಐ ಕಾಶೀನಾಥ ಯಾದವ್ ಕುಟುಂಬಸ್ಥರಿಗೆ ಶಾಸಕ ಶರಣು ಸಲಗರ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ಸಾಂತ್ವನ ಹೇಳಿದರು.
Published on

ಬಸವಕಲ್ಯಾಣ: ಮುಡಬಿ ವಾಡಿ ಗ್ರಾಮದ ನಿವಾಸಿ, ಕರ್ತವ್ಯನಿರತ ಮಂಠಾಳ ಠಾಣೆ ಕ್ರೈಂ ವಿಭಾಗದ ಪಿಎಸ್‌ಐ ಕಾಶೀನಾಥ ಯಾದವ್ (೫೯) ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದು, ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕಲಖೋರಾ ದೇವಿ ತಾಂಡಾದಲ್ಲಿ ಶ್ರಾವಣ ಮಾಸ ನಿಮಿತ್ತ ನಡೆದಿರುವ ಸಪ್ತಾಹ ಕಾರ್ಯಕ್ರಮದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾಗ ಭಾನುವಾರ ತಡರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಸ್ವಗ್ರಾಮ ಮುಡಬಿ ವಾಡಿಯಲ್ಲಿ ಸೋಮವಾರ ಮಧ್ಯಾಹ್ನ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಿತು. ಬೀದರ್‌ನ ಸಶಸ್ತç ಮೀಸಲು ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

ಶಾಸಕ ಶರಣು ಸಲಗರ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ಮುಖಂಡ ಬಾಬು ಹೊನ್ನಾನಾಯಕ, ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್‌ಐಗಳಾದ ಜಯಶ್ರೀ ಹೊಡಲ್, ಸುವರ್ಣಾ ಮಲಶೆಟ್ಟಿ, ಮಹೇಂದ್ರಕುಮಾರ ಇತರರಿದ್ದರು.

ಮೃತಪಟ್ಟ ಪಿಎಸ್‌ಐ ಕುಟುಂಬಸ್ಥರಿಗೆ ಶಾಸಕ ಸಲಗರ ಹಾಗೂ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ಸಾಂತ್ವಾನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net