ನೋಟಿಸ್ ನೀಡಿದವರ ವಿರುದ್ಧ ಕ್ರಮವಾಗಲಿ

PROTEST
ರೈತರ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಲು ಆಗ್ರಹಿಸಿ ಕಾರಟಗಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ಶರಣಪ್ಪ ದೊಡ್ಡಮನಿ, ದೊಡ್ಡನಗೌಡ ಯರಡೋಣ, ಯಮನೂರಪ್ಪ ನಾಯಕ, ಪಂಪಣ್ಣ ನಾಯಕ, ಹನುಮಂತಪ್ಪ, ಮರಿಸ್ವಾಮಿ ಇದ್ದರು.
Published on

ಕಾರಟಗಿ: ರಾಜ್ಯದ ಹಲವು ಜಿಲ್ಲೆಗಳ ಕೃಷಿ ಭೂಮಿ ಪಹಣಿಗಳಲ್ಲಿ ನಮೂದಿಸಿರುವ ವಕ್ಫ್ ಆಸ್ತಿ ಎಂಬುದನ್ನು ತೆಗೆದು ಹಾಕುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಕ್ಫ್‌ನ 1774ರ ಗೆಜೆಟ್‌ನಲ್ಲಿರುವ ರೈತರ ಜಮೀನುಗಳನ್ನು ಅದರಿಂದ ತೆಗೆದು ಹಾಕಬೇಕು. ಕೃಷಿಕರ ಬದುಕಿನಲ್ಲಿ ವಕ್ಫ್ ಮತ್ತು ಸರ್ಕಾರ ಚೆಲ್ಲಾಟವಾಡುತ್ತಿದೆ. ಇದನ್ನು ಇಲ್ಲಿಗೆ ಕೈಬಿಟ್ಟು ಅನ್ನದಾತರ ಕ್ಷಮೆ ಕೇಳಬೇಕು. ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವ ಹಾಗೂ ರೈತರಿಗೆ ನೋಟಿಸ್ ನೀಡಿರುವ ಎಲ್ಲ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪದಾಧಿಕಾರಿಗಳಾದ ಶರಣಪ್ಪ ದೊಡ್ಡಮನಿ, ದೊಡ್ಡನಗೌಡ ಯರಡೋಣ, ಯಮನೂರಪ್ಪ ನಾಯಕ, ಪಂಪಣ್ಣ ನಾಯಕ, ಹನುಮಂತಪ್ಪ, ಮರಿಸ್ವಾಮಿ, ಶಂಕರ್, ಬಸವರಾಜ, ಶರಣಪ್ಪ, ದುರುಗೇಶ್, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net