ಕಾರ್ಪಣ್ಯದ ಹೂವು ಪುಸ್ತಕ ಬಿಡುಗಡೆ

2adarshkdga4
Published on

ಮಡಿಕೇರಿ: ಕವಯತ್ರಿ ಕೃಪಾ ದೇವರಾಜ್‌ರವರ ಹೊಸ ಕೃತಿ ಕಾರ್ಪಣ್ಯದ ಹೂವು ಕವನ ಸಂಕಲನ ಮಂಗಳವಾರ ಕಣಿವೆಯ ಸುಂದರ ಪರಿಸರದಲ್ಲಿ ಅನೌಪಚಾರಿಕ ಸಭೆಯೊಂದರಲ್ಲಿ ಬಿಡುಗಡೆಗೊಂಡಿತು.


ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಭಾರದ್ವಾಜ್‌ರವರು, ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು ಹೊರ ಹೊಮ್ಮುತ್ತವೆ ಎಂದರು.


ಬೆಂಗಳೂರಿನ ಲೇಖಕ ಇರ್ಫಾನ್ ಮಾತನಾಡಿ, ಕೊಡಗಿನ ಸುಂದರ ಪರಿಸರ ಲೇಖರಿಗೆ ಸುಂದರ ವಿಷಯ ಒದಗಿಸುತ್ತದೆ ಎಂದರು.


ಲೇಖಕಿ ಕೃಪಾದೇವರಾಜ್ ಮಾತನಾಡಿ, ಸರಳತೆ ಬಯಸುವ ತಾನು, ಕಥಾ ಸಂಕನವನ್ನೂ ಅದ್ಧೂರಿಯಾಗಿ ಬಿಡುಗಡೆ ಮಾಡಲು ಬಯಸಲಿಲ್ಲ ಎಂದರು.


ಬರಹಗಾರ ನೌಶದ್ ಜನ್ನತ್, ಪರ್ತಕರ್ತ ಬಿ.ಜಿ.ಅನಂತಶಯನ, ಚುಟುಕ ಕವಿ ಹಾ.ತಿ.ಜಯಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net