ಕರೊನಾ ವೈರಸ್‌ನಿಂದ ಆತಂಕವಿಲ್ಲ, ಎಂ.ಎಸ್.ರಾಮಯ್ಯಹರ್ಷ ಆಸ್ಪತ್ರೆ ಶಾಖಾ ಮುಖ್ಯಸ್ಥ ನರೇಶ್ ಅಭಿಮತ

15 Nela ph 4 Corona Virus Awerness
Published on

ನೆಲಮಂಗಲ: ಕರೊನಾ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲದಿದ್ದರೂ ನಿರ್ಲಕ್ಷ್ಯವಹಿಸುವಂತಿಲ್ಲ ಎಂದು ಎಂ.ಎಸ್.ರಾಮಯ್ಯಹರ್ಷ ಆಸ್ಪತ್ರೆ ಶಾಖಾ ಮುಖ್ಯಸ್ಥ ನರೇಶ್ ತಿಳಿಸಿದರು.

ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯಿಂದ ಭಾನುವಾರ ಆಯೋಜಿಸಿದ್ದ ಕರೊನಾ ವೈರಸ್ ಹರಡುವಿಕೆ ತಡೆ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶವಿದೇಶಗಳಲ್ಲಿ ಕರೊನಾ ವೈರಸ್ ಹರಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಆದರೆ ದಿನದ 24 ಗಂಟೆ ಸಾರ್ವಜನಿಕರ ಸೇವೆ ಮಾಡುವ ಅಧಿಕಾರಿ, ಸಿಬ್ಬಂದಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸಾರ್ವಜನಿಕರ ಮಧ್ಯದಲ್ಲಿಯೇ ಕೆಲಸ ಮಾಡಬೇಕಿದ್ದು, ಎಚ್ಚರಿಕೆವಹಿಸಬೇಕು. ಅದರಲ್ಲೂ ಕುಟುಂಬದಲ್ಲಿನ ವಯೋವೃದ್ಧರು ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಸೋಂಕು ತಗಲುವ ಸಾಧ್ಯತೆಗಳಿದ್ದು ಮುಂಜಾಗ್ರತೆವಹಿಸಬೇಕು ಎಂದು ಸಂಚಾರಿ ಇನ್‌ಸ್ಪೆಕ್ಟರ್ ಎಸ್.ಆರ್.ವೀರೇಂದ್ರಪ್ರಸಾದ್ ತಿಳಿಸಿದರು.

ಆಸ್ಪತ್ರೆ ಮುಖ್ಯವ್ಯವಸ್ಥಾಪಕಿ ಡಾ.ಕಸ್ತೂರಿರಕ್ಷಿತಾ, ಸಬ್‌ಇನ್‌ಸ್ಪೆಕ್ಟರ್ ಮೋಹನ್‌ಕುಮಾರ್, ಎಸ್.ಎಸ್.ಐ ಹುಲ್ಲೂರಯ್ಯ, ಎಚ್.ರಾಮಯ್ಯ, ಪ್ರಭುದೇವ್ ಮತ್ತಿತರರು ಇದ್ದರು.

ಸಂಶಯಾಸ್ಪದ ಕರೊನಾ ಸೋಂಕು ವ್ಯಕ್ತಿಗಳ ಚಿಕಿತ್ಸೆಗೆ ತಾಲೂಕಿನ ಟಿ.ಬೇಗೂರು ಬಳಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಆಸ್ಪತ್ರೆಯನ್ನು ಗುರುತಿಸಲಾಗಿದ್ದು, ಅವಶ್ಯವಿರುವ ಸೌಕರ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಂ.ಶ್ರೀನಿವಾಸಯ್ಯ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net