ಶ್ರದ್ಧಾ ಭಕ್ತಿಯಿಂದ ನಡೆದ ಕಾರೋಣ ತೆರೆ

15 vpt 2
Published on


ಕೊಡಗು : ಕಾರೋಣ ತೆರೆಯು ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರೆವೇರಿತು. ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿ ಮಂಡೇಪಂಡ ಐನ್ ಮನೆಯಲ್ಲಿ ಕಾರೋಣ ತೆರೆಯು ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರೆವೇರಿತು.
ಎರಡು ದಿನಗಳ ಕಾಲ ನಡೆದ ತೆರೆ ಉತ್ಸವದಲ್ಲಿ ಶನಿವಾರ ರಾತ್ರಿ ತೋತಾ ತೆರೆ, ಕಾರೊಣಾ ತೆರೆ ನಡೆಯಿತು. ಭಾನುವಾರ ಬೆಳಗ್ಗೆ ಕುಳಿಯ ತೆರೆ, ಮುದ್ದಪ್ಪಜ್ಜ ತೆರೆ, ಪಾಷಾಣಮೂರ್ತಿ ತೆರೆ ಮತ್ತು ಕಡಿಕಾರೋಣ ಅಜ್ಜಪ್ಪ ತೆರೆಗಳು ನಡೆದವು. ಕುಟುಂಬದ ಮುಖ್ಯಸ್ಥರಾದ ರೋಷನ್ ಸುಬ್ರಮಣಿ, ಮಂಜು ಕಾಳಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net