ಕರೋಹಟ್ಟಿ ಗ್ರಾಪಂ ಉಪಾಧ್ಯಕ್ಷ ರೇವಣ್ಣ

ತಿ.ನರಸೀಪುರ ತಾಲೂಕು ಕರೋಹಟ್ಟಿ ಗ್ರಾಪಂ ಉಪಾಧ್ಯಕ್ಷರಾಗಿ ಕೇತಹಳ್ಳಿ ಗ್ರಾಮದ ರೇವಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಗೊಂಡರು. ಮಂಜುಳಾ, ಬನ್ನಹಳ್ಳಿ ಸೋಮಣ್ಣ, ಪ್ರಭು, ಸುರೇಶ್, ನಾಗರಾಜು, ಕೆ.ಬಿ.ಜಗದೀಶ್, ಪುಟ್ಟಸ್ವಾಮಿ ಇತರರಿದ್ದರು.
ತಿ.ನರಸೀಪುರ ತಾಲೂಕು ಕರೋಹಟ್ಟಿ ಗ್ರಾಪಂ ಉಪಾಧ್ಯಕ್ಷರಾಗಿ ಕೇತಹಳ್ಳಿ ಗ್ರಾಮದ ರೇವಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಗೊಂಡರು. ಮಂಜುಳಾ, ಬನ್ನಹಳ್ಳಿ ಸೋಮಣ್ಣ, ಪ್ರಭು, ಸುರೇಶ್, ನಾಗರಾಜು, ಕೆ.ಬಿ.ಜಗದೀಶ್, ಪುಟ್ಟಸ್ವಾಮಿ ಇತರರಿದ್ದರು.
Published on

ತಿ.ನರಸೀಪುರ: ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕೇತಹಳ್ಳಿ ಗ್ರಾಮದ ರೇವಣ್ಣ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಉಪಾಧ್ಯಕ್ಷ ನಾಗರಾಜು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆ ಜರುಗಿತು. ಉಪಾಧ್ಯಕ್ಷ ಸ್ಥಾನಕ್ಕೆ ರೇವಣ್ಣ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಕಾವೇರಿ ನೀರಾವರಿ ನಿಗಮದ ಎಇಇ ಎಸ್.ಮಂಜುನಾಥ್ ಘೋಷಿಸಿದರು. ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚುನಾವಣೆ ವಿಶೇಷ ಸಭೆಗೆ ಅಧ್ಯಕ್ಷೆ ಮಂಜುಳಾ, ನಿಕಟಪೂರ್ವ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಕೆ.ಬಿ.ಜಗದೀಶ್, ಪುಟ್ಟಸ್ವಾಮಿ, ಎಸ್.ಎಲ್.ಜಯಶ್ರೀ, ನಂದಿನಿ, ಪ್ರಭು, ಪುಟ್ಟಬಸಮ್ಮ, ಸುಶೀಲಮ್ಮ, ಸುರೇಶ್, ಪಿ.ಮಂಜು ಹಾಜರಾಗಿದ್ದರು. ಸದಸ್ಯರಾದ ಸವಿತಾ, ದಿವ್ಯ, ಕೆ.ಎನ್.ನಾಗರಾಜು, ಮಮತಾ, ಪ್ರಕಾಶ್, ಸಿದ್ದಮ್ಮ ಹಾಗು ಗೋವಿಂದ್ ಗೈರಾಗಿದ್ದರು.

ಗುತ್ತಿಗೆದಾರ ಕೇತಹಳ್ಳಿ ರಾಜಣ್ಣ, ಚಿಕ್ಕಣ್ಣ, ಪಿಡಿಒ ಸೋಲೊಮನ್ ರಾಜ್, ಮಾಜಿ ಅಧ್ಯಕ್ಷ ಚಿಕ್ಕಣ್ಣ, ಮುಖಂಡರಾದ ಕೇತಹಳ್ಳಿ ಲಿಂಗರಾಜು, ರೇವಣ್ಣ, ಗುರುಮಲ್ಲಪ್ಪ, ಬನ್ನಹಳ್ಳಿ ಸೋಮಣ್ಣ, ಬಿಲ್ ಕಲೆಕ್ಟರ್ ರಾಜು, ಗಣಕ ಯಂತ್ರ ನಿರ್ವಾಹಕಿ ಶೈಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net