ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್ ನಕಲು; ಎಚ್ಚರ ವಹಿಸಲು ಕುಲಸಚಿವರ ಸೂಚನೆ

10 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಹ್ಯಾಕ್ ಆಗಿದೆ. ವಿಶ್ವವಿದ್ಯಾಲಯವು 2024ನೇ ಸಾಲಿನ 75ನೇ ವಾರ್ಷಿಕ ಘಟಿಕೋತ್ಸವಕ್ಕೆ www.kud.ac.in ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಿತ್ತು. ಆದರೆ, ಅನಾಮಧೇಯ ವ್ಯಕ್ತಿಯೊಬ್ಬ ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್ ನಕಲು ಮಾಡಿದ್ದಾನೆ. ವಿದ್ಯಾರ್ಥಿಗಳಿಂದ ಶುಲ್ಕದ ಮೊತ್ತವನ್ನು ತನ್ನ ಖಾತೆಗೆ ಭರಿಸಿಕೊಳ್ಳುತ್ತಿವ ವಿಷಯ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ಘಟಿಕೋತ್ಸವದ ಶುಲ್ಕವನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಽಕೃತ ವೆಬ್‌ಸೈಟ್ www.kud.ac.in ನಲ್ಲಿ ಲಭ್ಯವಿರುವ ಎಸ್‌ಬಿಐ ಪೋರ್ಟಲ್ ಮುಖಾಂತರ ಮಾತ್ರ ಭರಿಸಬೇಕು. ಅಥವಾ ಯುಯುಸಿಎಂಎಸ್ ತಂತ್ರಾ0ಶದ ಮುಖಾಂತರ ಮಾತ್ರ ಶುಲ್ಕ ಭರಿಸಬೇಕು ಎಂದು ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net