ವಿಶ್ವ ರ‍್ಯಾಂಕಿ೦ಗ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ

30 Dwd 5 (KUD)
Published on

ಧಾರವಾಡ: ಲಂಡನ್ ಮೂಲದ ದಿ ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝಿನ್ (ಟಿಎಚ್‌ಇ) ಪ್ರಸಕ್ತ ಸಾಲಿನ ವಿಶ್ವದ ಉನ್ನತ (ಟಾಪ್) ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ರಾಜ್ಯದ 19 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ನಗರದ ಕರ್ನಾಟಕ ವಿಶ್ವವಿದ್ಯಾಲಯ ಪ್ರಥಮ ಸ್ಥಾನದಲ್ಲಿದ್ದು ವಿಶ್ವ ರ‍್ಯಾಂಕಿ೦ಗ್‌ನಲ್ಲಿ 1000ದಿಂದ 1200ನೇ ಹಂತದ ರ‍್ಯಾಂಕಿ೦ಗ್ ಪಡೆದಿದೆ.
ವಿಶ್ವದ 108 ರಾಷ್ಟಗಳ ವಿಶ್ವವಿದ್ಯಾಲಯಗಳಿಗೆ ರ‍್ಯಾಂಕಿ೦ಗ್ ನೀಡಲಾಗಿದೆ. ಬೋಧನೆ, ಸಂಶೋಧನಾ ಪರಿಸರ, ಸಂಶೋಧನಾ ಗುಣಮಟ್ಟ, ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನ ವಿಷಯ ಮಾಪನಗಳನ್ನೊಳಗೊಂಡು 18 ಸೂಚ್ಯಂಕಗಳನ್ನು ಒಳಗೊಂಡ ಜಾಗತಿಕ ವಿಶ್ವವಿದ್ಯಾಲಯಗಳ 3.0 ಸಂಶೋಧನಾ ಪದ್ಧ್ದತಿಯಲ್ಲಿ ವಿಶ್ವದ 2,673ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸರ್ವೇ ಮಾಡಲಾಗಿತ್ತು.
ಕರ್ನಾಟಕದಲ್ಲಿ 3 ವಿಶ್ವವಿದ್ಯಾಲಯಗಳು ಮಾತ್ರ ಅರ್ಜಿ ಸಲ್ಲಿಕೆಗೆ ಮಾನ್ಯತೆ ಪಡೆದಿದ್ದವು. ಅದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ 1000ದಿಂದ 1200ನೇ ರೇಂಜ್‌ನಲ್ಲಿ ಜಾಗತಿಕ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕುಲಪತಿ ಪ್ರೊ. ಕೆ.ಬಿ. ಗುಡಸಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net