ಒಡಂಬಡಿಕೆಯಿ0ದ ಶೈಕ್ಷಣಿಕ ಗುಣಮಟ್ಟ ಹೆಚ್ಚಳ

web 1
Published on

ಧಾರವಾಡ: ವೃತ್ತಿಪರ ತರಬೇತಿ ಸಂಸ್ಥೆಗಳ ಜೊತೆ ಶೈಕ್ಷಣಿಕ ಒಪ್ಪಂದದಿAದ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಧಾರವಾಡ ಗುಂಗರಗಟ್ಟಿಯ ಕರ್ನಾಟಕ ಅರಣ್ಯ ಅಕಾಡೆಮಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ನಡುವೆ ಶೈಕ್ಷಣಿಕ ಒಪ್ಪಂದದ ಪತ್ರಗಳನ್ನು ವಿನಿಮಯ ಮಾಡಿಕೊಂಡು ಅವರು ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯವು ಅರಣ್ಯ ಅಕಾಡೆಮಿಯೊಂದಿಗೆ ಮಾಡಿಕೊಂಡ ಶೈಕ್ಷಣಿಕ ಒಪ್ಪಂದ ಹೊಸ ಮೈಲುಗಲ್ಲು ಆಗಲಿದೆ ಎಂದರು.
ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಅರಣ್ಯ ಇಲಾಖೆಯ ನಿರ್ದೇಶಕ ವಿಜಯಲಾಲ್ ಮೀನಾ, ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ, ಅರಣ್ಯ ಅಽಕಾರಿಗಳಾದ ಲಕ್ಷ÷್ಮಣ ಕಟ್ಟಿಮನಿ, ಗಿರಿಧರ, ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ, ಪ್ರೊ. ಎಸ್. ಡೇವಿಡ್, ಕಾಲೇಜು ಅಭಿವೃದ್ಧಿ ಮಂಡಳಿಯ ಡಾ. ಸುರೇಶ ತುವಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net