ಕವಿವಿ ಘಟಿಕೋತ್ಸವ: ವಿದ್ಯಾರ್ಥಿನಿಯರದ್ದೇ ಮೇಲುಗೈ

24 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಯುವತಿಯರೇ ಅತೀ ಹೆಚ್ಚು ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ 9 ಚಿನ್ನದ ಪದಕ, ಕನ್ನಡ ಅಧ್ಯಯನ ವಿಭಾಗದ ಸಂಗೀತಾ ಲಕ್ಕಪ್ಪನವರ 9, ಗಣಿತ ವಿಭಾದ ಶ್ರೀಲಕ್ಷ್ಮೀ ಹೆಗಡೆ, ಜೀವರಸಾಯನ ಶಾಸ್ತ್ರ ವಿಭಾಗದ ಹಷಿರ್ತಾ ಡಿ., ಪ್ರಾಣಿಶಾಸ್ತ್ರ ವಿಭಾಗದ ವಿಸ್ಮಯಾ ಅಂಗಡಿ, ಲೈಬ್ರರಿ ಸೈನ್ಸ್​ ವಿಭಾಗದ ರಚನಾ ಶಿವಳ್ಳಿ ತಲಾ 8, ರಾಜಕೀಯ ಶಾಸ್ತ್ರ ವಿಭಾಗದ ಮಯೂರ ಖಿಲಾರಿ, ಅರ್ಥಶಾಸ್ತ್ರ ವಿಭಾಗದ ಜೀನತ್​ ಕೌಸರ ಖಾಜಿ, ವಿದೇಶ ಭಾಷೆ ಅಧ್ಯಯನ ವಿಭಾಗದ ರೋಸೆಟ್​ ದದ್ದಾಪುರಿ ತಲಾ 7, ತತ್ವಶಾಸ್ತ್ರ ವಿಭಾಗದ ಶರಣಬಸವ ಕಮರಿಮಠ 6 ಚಿನ್ನದ ಪದಕ ಹಾಗೂ ನಗದು ಪ್ರಶಸ್ತಿ ಪಡೆದಿದ್ದಾರೆ.
ಇನ್ನೂ ಕೆಲ ವಿಭಾಗಗಳ ವಿದ್ಯಾರ್ಥಿಗಳು ಸೇರಿ ಒಟ್ಟು 120 ವಿದ್ಯಾರ್ಥಿಗಳಿಗೆ 278 ಚಿನ್ನದ ಪದಕ ಪ್ರದಾನ ಮಾಡಲಾಯಿತು. 25,425 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಉಳಿದಂತೆ 52 ವಿದ್ಯಾರ್ಥಿಗಳಿಗೆ ಪಾರಿತೋಷಕ, 73 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರದಾನ ಮಾಡಲಾಯಿತು. 149 ಪಿಎಚ್​.ಡಿ ಪದವಿ, 1 ಎಂಫಿಲ್​ ಪದವಿ, 4067 ಸ್ನಾತಕೋತ್ತರ ಪದವಿ, 21,139 ಸ್ನಾತಕ ಪದವಿ, 47 ಕಾನೂನು ಪದವಿ, 22 ಡಿಪ್ಲೋಮಾ ಪದವಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net