

Bengaluru transport strike : ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು ಸರ್ಕಾರದ ಸಂಧಾನಕ್ಕೂ ಬಗ್ಗದೆ, 1 ದಿನ ಮುಷ್ಕರ ಮುಂದೂಡಬೇಕೆಂಬ ಹೈಕೋರ್ಟ್ ಆದೇಶಕ್ಕೂ ಓಗೂಡದೆ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ. ಇದರಿಂದಾಗಿ ರಾಜ್ಯದ ಜನತೆಗೆ ಸಂಚಾರ ಸಾಧ್ಯವಾಗದೇ ಪರದಾಡುವಂತಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಡಿಪೋಗಳಲ್ಲೇ ಬಹುತೇಕ ಬಸ್‌ಗಳು ಠಿಕಾಣಿ ಹೂಡಿವೆ. ಬೆಳಗಿನ ಜಾವ ಬಸ್ ಸೇವೆ ಇತ್ತು. ಆದರೆ, 7 ಗಂಟೆಯ ನಂತರ ಯಾವುದೇ ಬಸ್ ಸೇವೆಗಳು ನಗರದಲ್ಲಿ ಇಲ್ಲ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ, ಕಚೇರಿಗೆ ತೆರಳಲು ಸಹ ಕಷ್ಟವಾಗುತ್ತಿದೆ.
ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಹಾಸನ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಚಾಮರಾಜನಗರ, ಬೀದರ್ ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಎಸ್ಮಾ ಜಾರಿ, ಕೋರ್ಟ್ ಆದೇಶ ಹಾಗೂ ಅಮಾನತ್ತಿನ ಆದೇಶವಿದ್ದರೂ ಬಹುತೇಕ ಮಂದಿ ಕೆಲಸಕ್ಕೆ ಹಾಜರಾಗದೇ, ಮುಷ್ಕರದಲ್ಲಿ ತೊಡಗಿದ್ದಾರೆ.
ಬಳ್ಳಾರಿಯಲ್ಲಿ ಬಹುತೇಕ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ದೂರದ ಊರಿಂದ ಬಂದ ಬಸ್‌ಗಳು ನಿಲ್ದಾಣದಲ್ಲಿ ಉಳಿದಿವೆ. ಬೆಳಗ್ಗೆಯಿಂದಲೂ ಡಿಪೋದಿಂದ ಯಾವುದೇ ಬಸ್‌ಗಳು ಸಂಚರಿಸಿಲ್ಲ. ಸಾರಿಗೆ ಸೌಕರರು ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಸಂಘಟಕರು ಕೂಡ ನಿಲ್ದಾಣದ ಬಳಿ ಬಂದಿಲ್ಲ. ಕೇವಲ ಆಂಧ್ರ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ಓಡಾಡುತ್ತಿವೆ.
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ. ಈವರೆಗೂ ಹೈದರಾಬಾದ್, ಇಂಡಿ ಹಾಗೂ ಮಂತ್ರಾಲಯಕ್ಕೆ ಕೇವಲ ಮೂರು ಬಸ್‌ಗಳು ಮಾತ್ರ ತೆರಳಿವೆ. ಬಸ್ ನಿಲ್ದಾಣದಿಂದ ತೆರಳಲು ಚಾಲಕರ ಹಿಂದೇಟು ಹಾಕುತ್ತಿದ್ದಾರೆ. ಬಸ್ಗಳಿಲ್ಲದೆ ರಾಯಚೂರಿನ ಕೇಂದ್ರೀಯ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.
ರಾಜ್ಯದಲ್ಲಿ KSRTC ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಇಂದು ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ. ಇದರಿಂದಾಗಿ ಚಿತ್ರದುರ್ಗದಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಚಿತ್ರದುರ್ಗದಲ್ಲಿ ಯಾವುದೇ ಸರ್ಕಾರಿ ಬಸ್‌ಗಳು ರೋಡಿಗಿಳಿದಿಲ್ಲ ಮತ್ತು ನೌಕರರು ಸಹ ಕರ್ತವ್ಯಕ್ಕೆ ಹಾಜರಾಗಿಲ್ಲ.
ರಾಜ್ಯಾದ್ಯಂತ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಚಾಮರಾಜನಗರದಲ್ಲಿ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿದೆ. ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತವು. ದೂರದೂರಿಗೆ ತೆರಳುವ ಪ್ರಯಾಣಿಕರು ಬಸ್ ನಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂತು. ಇದರ ನಡುವೆ ಖಾಸಗಿ ಬಸ್ ಗಳು ಸಾಲಾಗಿ ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋದವು. ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿಲ್ಲ. ಸದ್ಯ ಸರ್ಕಾರಿ ಬಸ್ ನಿಲ್ದಾಣವನ್ನು ಖಾಸಗಿ ಬಸ್‌ಗಳು ಆಕ್ರಮಿಸಿವೆ. KSRTC ಬಸ್ ಸಂಚಾರ ಬಂದ್ ಹಿನ್ನೆಲೆ ಪ್ರಯಾನಿಕರು ಖಾಸಗಿ ಬಸ್ ಮೊರೆ ಹೋಗಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಕಲಬುರಗಿಯಲ್ಲಿ ಬಿರುಸಾಗಿದ್ದು ಸರ್ಕಾರಿ ಬಸ್ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಜನರು ಪ್ರಯಾಣಿಕರ ಪರದಾಡುತ್ತಿದ್ದಾರೆ. ನಗರದ ಕೇಂದ್ರ ಬಸ್ ಸದಾ ಬಸ್ ತುಂಬಿರುತ್ತಿದ್ದವು ಆದರೆ, ಇಂದು ಖಾಲಿಯಾಗಿದೆ. ಪ್ರಯಾಣಿಕರು ಬಸ್ ಬರುತ್ತವೆ ಎಂದು ಕಾದು ಕುಳಿತುಕೊಂಡಿದ್ದಾರೆ. ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದು, ನಗರ ಸಾರಿಗೆ ಸಂಚಾರಕ್ಕೂ ಸಂಕಷ್ಟ ಅನುಭವಿಸುವಂತಾಗಿದೆ.