ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ವಾಹನ ಕಳ್ಳತನ !?

karnataka-state-primery-school-association-president-shambhulinganagouda-halageti-vehicle-teft-alligetion-koppal
ನಾಪತ್ತೆಯಾಗಿದೆ ಹೇಳಲಾಗಿರುವ ಕಾರ್.
Published on

ಕೊಪ್ಪಳ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒಳ ಜಗಳ ಮತ್ತೊಮ್ಮೆ ಬಯಲಿಗೆ ಬಂದಿದೆ. ತಮ್ಮ ವಾಹನವನ್ನು ಯಾರೋ ರಾತ್ರಿ ವೇಳೆ ಕದ್ದೊಯ್ದಿದ್ದಾರೆಂದು ಸಂಘದ ಅಧ್ಯಕ್ಷ‌ ಶಂಭುಲಿಂಗನಗೌಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ !

ಸಂಘದ ಅಧ್ಯಕ್ಷರಾಗಿ ಕೊಪ್ಪಳದ ಶಂಭುಲಿಂಗನಗೌಡ ಕಳೆದ ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ್ದಾರೆ. ಇದಾದ ಬಳಿಕ ಮಂಡ್ಯದ ನಾಗೇಶ್ ಎಂಬುವರು ಅಧ್ಯಕ್ಷರೆಂದು ಹೇಳಲಾಯಿತು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಈ ನಡುವೆ ಭಾನುವಾರ (ನ. 19)ರಂದು ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ ಕಚೇರಿ ವಾಹನ ಇದ್ದಕ್ಕಿದ್ದಂತೆ ಮಾಯವಾಗಿದೆ. (KA 50 MB 0382) ಚಾಲಕ ಹಾಗೂ ವಾಹನದ ಕೀ ತಮ್ಮ ಬಳಿಯೇ ಇರುವುದಾಗಿ ಶಂಭುಲಿಂಗನಗೌಡ ಹೇಳುತ್ತಿದ್ದಾರೆ.

ರಾತ್ರೋ ರಾತ್ರಿ ಯಾರೋ ತಮ್ಮ ವಾಹನ ಕದ್ದಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ.

ಆದರೆ, ಪೊಲೀಸರು ವಾಹನ ಬೆಂಗಳೂರಿನ ಗಾಂಧಿನಗರದ ಸಂಘದ ಕಚೇರಿ ಬಳಿ ಇದೆ ಎಂದು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net