ರಾಜ್ಯಾದ್ಯಂತ ಮುಕ್ತ ವಿವಿ ಪ್ರಾದೇಶಿಕ ಕಚೇರಿ ಆರಂಭ

1-KGL PHOTO-6
Published on

ಕೊಳ್ಳೇಗಾಲ: ಉನ್ನತ ಶಿಕ್ಷಣ ಎಲ್ಲೆಡೆ ಸಿಗಬೇಕೇಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ರಾಜ್ಯಾದ್ಯಂತ ಪ್ರಾದೇಶಿಕ ಕಚೇರಿಯನ್ನು ಆರಂಭಿಸುತ್ತಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಹೇಳಿದರು.

ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದ ಎದುರಿನಲ್ಲಿ ಗುರುವಾರ ನೂತನವಾಗಿ ಆರಂಭಗೊಂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮುಕ್ತ ವಿವಿ ಪ್ರಾದೇಶಿಕ ಕಚೇರಿ ತೆರೆಯಬೇಕೆಂದು ಸರ್ಕಾರ ಆದೇಶಿಸಿದೆ. ದೇಶದಲ್ಲಿ 17 ಮುಕ್ತ ವಿಶ್ವವಿದ್ಯಾಲಯಗಳಿದ್ದು, ಈ ಪೈಕಿ ಕರ್ನಾಟಕ ಮುಕ್ತ ವಿವಿ ಅಗ್ರಗಣ್ಯ 2ನೇ ಸ್ಥಾನದಲ್ಲಿದೆ. ನಮ್ಮ ವಿಶ್ವವಿದ್ಯಾಲಯ 3 ಹಂತದಲ್ಲಿ ಕಾರ್ಯನಿರ್ವಹಿಸುತ್ತದೆ. 35 ಪ್ರಾದೇಶಿಕ ಕೇಂದ್ರಗಳು, 131 ಸ್ಟಡಿ ಸೆಂಟರ್‌ಗಳಿವೆ. ಇದೀಗ ಕೊಳ್ಳೇಗಾಲದಲ್ಲಿ ವಿವಿ ಪ್ರಾದೇಶಿಕ ಕಚೇರಿ ತೆರೆಯಲಾಗಿದೆ ಎಂದರು.

ಮುಕ್ತ ವಿವಿ ಕುಲಸಚಿವ ಕೆ.ಎಲ್.ಎನ್.ಮೂರ್ತಿ, ಅಧ್ಯಯನ ಕೇಂದ್ರದ ಮುಖ್ಯಸ್ಥ ಎಂ. ರಾಮನಾಥಂ ನಾಯ್ಡು, ಮಹದೇಶ್ವರ ಕಾಲೇಜಿನ ಸಂಯೋಜಕ ಮಹದೇವಯ್ಯ, ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕಿ ಎನ್.ಧನಲಕ್ಷ್ಮೀ, ಡೇಟಾ ಎಂಟ್ರಿ ಆಪರೇಟರ್ ಎಂ.ಎನ್.ಪಲ್ಲವಿ, ದ್ವಿತೀಯ ದರ್ಜೆ ಸಹಾಯಕ ವಿಜಯ್, ಗಿರೀಶ್, ಸಿದ್ದೇಶ್ ಕುಮಾರ್, ಸುನೀಲ್, ಚೈತ್ರಾ, ಎಂ.ವಿ.ಬೃಂದಾ, ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net