ತೃತೀಯ ಲಿಂಗಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಆರೋಪ

transgender
Published on

ಬೆಂಗಳೂರು: ಭರವಸೆ ಈಡೇರಿಸದ ಹಿನ್ನೆಲೆ ಸರ್ಕಾರದ ವಿರುದ್ಧ ತೃತೀಯ ಲಿಂಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೃತೀಯ ಲಿಂಗಿಗಳಿಗೆ ಭರವಸೆ ಕೊಟ್ಟು ಆ ನಂತರ ಸಿದ್ದು ಸರ್ಕಾರ ಕೈಕೊಟ್ಟಿದೆ ಎಂದು ದೂರಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಭರವಸೆ ಕೊಟ್ಟಿತ್ತು.

ಕಲ್ಯಾಣ ಮಂಡಳಿ ರಚಿಸಿ 200 ಕೋಟಿ ಮೀಸಲಿಡೊದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡಿದೆ. ಆದರೆ ಬಜೆಟ್‌ನಲ್ಲಿ ಕಲ್ಯಾಣ ಮಂಡಳಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಮನವಿಯನ್ನು ಮಾಡಿದ್ರೂ ಪ್ರಯೋಜನವಾಗಿಲ್ಲ.

ನುಡಿದಂತೆ ನಡೆಯುತ್ತೇವೆ ಎನ್ನುವ ಸರ್ಕಾರ ದ್ರೋಹ ಮಾಡಿದೆ ಎನ್ನುತ್ತಿದ್ದಾರೆ ತೃತೀಯ ಲಿಂಗಿಗಳು. ಕಲ್ಯಾಣ ಮಂಡಳಿ ರಚಿಸಿ ಲಿಂಗತ್ವ ಅಲ್ವಸಂಖ್ಯಾತರಿಗೆ ಕೊಟ್ಟಮಾತು ಉಳಿಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಅಷ್ಟೇ ಅಲ್ಲ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಾವಲಂಬಿ ಜೀವನಕ್ಕೆ ಕೌಶಲ ತರಬೇತಿ ನೀಡುವಂತೆ ಮನವಿ ಮಾಡಲಾಗಿದ್ದು, ಕಲ್ಯಾಣ ಮಂಡಳಿ ರಚಿಸಿ ಸ್ವ ಉದ್ಯೋಗಕ್ಕೆ ಸಹಾಯ ಧನ ನೀಡುವಂತೆ ಪಟ್ಟು ಹಿಡಿಯಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net