ಆ.24ರಿಂದ ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-1 ಚಲನಚಿತ್ರ ಗೀತೆ ಗಾಯನ ಸ್ಪರ್ಧೆ

Singing Competition
ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್ ಮಾತನಾಡಿದರು.
Published on

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಕರ್ನಾಟಕ ಸ್ಟಾರ್ ಸಿಂಗರ್-2023 ಸೀಸನ್-1 ರಾಜ್ಯಮಟ್ಟದ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯನ್ನು ಆ.24ರಿಂದ ಭದ್ರಾವತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್ ತಿಳಿಸಿದರು.

ಸ್ಪರ್ಧೆಗೆ ಹೆಸರು ನೋಂದಾಯಿಸಲು ಆ.24ರ ಬೆಳಗ್ಗೆ 11 ಗಂಟೆ ಕೊನೆಯ ದಿನ. ಆಡಿಷನ್ ಭದ್ರಾವತಿಯ ಲಯನ್ಸ್ ಕ್ಲಬ್‌ನಲ್ಲಿ ಆ.24ರಂದು ಬೆಳಗ್ಗೆ 9ರಿಂದ ನಡೆಯಲಿದೆ. ಸೆಮಿಫೈನಲ್ ಆ.30ರಂದು ಲಯನ್ಸ್ ಕ್ಲಬ್‌ನಲ್ಲಿ ಹಾಗೂ ಫೈನಲ್ ಸೆ.9ರಂದು ಭದ್ರಾವತಿಯ ಶ್ರೀ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ. ಮತ್ತು ಪಾರಿತೋಷಕ, ದ್ವಿತೀಯ 15 ಸಾವಿರ ರೂ. ಮತ್ತು ಪಾರಿತೋಷಕ, ತೃತೀಯ 10 ಸಾವಿರ ರೂ. ಮತ್ತು ಪಾರಿತೋಷಕ ಹಾಗೂ ಸಮಾಧಾನಕರ ಬಹುಮಾನ 2 ಸಾವಿರ ರೂ. ನೀಡಲಾಗುವುದು ಎಂದರು.
ಫೈನಲ್‌ಗೆ ತೀರ್ಪುಗಾರರಾಗಿ ಕಲಾವಿದ ಗುರುರಾಜ್, ದಕ್ಷಿಣ ಭಾರತದ ಗಾಯಕ ಅಜಯ್ ವಾರಿಯರ್ ಮತ್ತು ಗಾಯಕಿ ಸುರೇಖಾ ಹೆಗ್ಗಡೆ, ವಾದ್ಯಗೋಷ್ಠಿಯಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ದೀಪಕ್ ಜಯಶೀಲನ್ ನೇತೃತ್ವದ ತಂಡ ಇರಲಿದೆ ಎಂದರು. ಸಂಘದ ಉಪಾಧ್ಯಕ್ಷ ಅಂತೋಣಿ ಮಾರ್ಟಿ ನ್, ಪ್ರಧಾನ ಕಾರ್ಯದರ್ಶಿ ಬಿ.ಚಿದಾನಂದ, ಸಹ ಕಾರ್ಯದರ್ಶಿ ಚರಣ್ ಕವಾಡ್, ಖಜಾಂಚಿ ಎ.ಪ್ರಶಾಂತ್, ಬಿ.ಆರ್.ವಿಕ್ರಂ, ವೈ.ಕೆ.ಹನುಮಂತಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net