

ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ದಿ.ಶಂಕರ್‌ನಾಗ್ ಸಂಸ್ಮರಣೆ ಕಾರ್ಯಕ್ರಮದಡಿ ಮೊದಲ ಬಾರಿಗೆ ಭದ್ರಾವತಿಯಲ್ಲಿ ಕರ್ನಾಟಕ ಸ್ಟಾರ್ ಸಿಂಗರ್ 2023 ಸೀಸನ್-1ರ -ೆÊನಲ್ ಸ್ಪರ್ಧೆ ಸೆ.6ರಂದು ನಗರದ ಶ್ರೀ ಮಂಜುನಾಥ ಕಲ್ಯಾಣಮಂಟಪದಲ್ಲಿ ಸಂಜೆ 4.30ಕ್ಕೆ ಆರಂಭವಾಗಲಿದೆ. ಆ.30ರಂದು ನಡೆದ ಸೆಮಿಫೈನಲ್‌ನಲ್ಲಿ 12 ಜನರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಮಂಜುನಾಥ್ ಹೇಳಿದರು.
ಫೈನಲ್ ಪಂದ್ಯದ ತೀರ್ಪುಗಾರರಾಗಿ ಸಂಗೀತ ದಿಗ್ಗಜರಾದ ಗುರುರಾಜ್, ಅಜಯ್ ವಾರಿಯರ್, ಹಾಗೂ ಸುರೇಖಾ ಹೆಗಡೆ ಭಾಗವಹಿಸಲಿದ್ದಾರೆ. ಸಂಘದ ಸದಸ್ಯ, ಧಾರಾವಾಹಿಯ ನಿರ್ದೇಶಕ ಹರ್ಷಪ್ರಿಯ ಅವರ ನಿರ್ದೇಶನದ ಹೆಜ್ಜಾರು ಚಲನಚಿತ್ರದ ಟ್ರೇಲರ್ ಹಾಗೂ ಅದೇ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಕಲಾವಿದೆ ವೀಣಾ ಲೋಕನಾಥ್ ಅವರಿಗೆ ದಿ.ಜಯಶೀಲನ್ ಪ್ರಶಸ್ತಿ ಹಾಗೂ ಕೀ ಬೋರ್ಡ್ ವಾದಕ ಮ್ಯಾಥ್ಯು ಅವರಿಗೆ ಗೀತಾಂಜಲಿ ಶ್ರೀನಿವಾಸ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿಜೇತ ಸ್ಪಽðಗಳಿಗೆ ಪ್ರಥಮ ಬಹುಮಾನ 25 ಸಾವಿರ ರೂ. ನಗದು, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ರೂ. ನಗದು ಹಾಗೂ ಪಾರಿತೋಷಕ, ಇಬ್ಬರಿಗೆ ಸಮಾಧಾನಕಾರ ಬಹುಮಾನ ನೀಡಲಾಗುವುದು ಎಂದರು.
ಸAಘದ ಪದಾಽಕಾರಿಗಳಾದ ಚರಣ್ ಕವಾಡ್, ಅಂತೋಣಿ ಮಾರ್ಟಿನ್, ಬಿ.ಚಿದಾನಂದ, ಎ.ಪ್ರಶಾಂತ್, ಬಿ.ಆರ್.ವಿಕ್ರಂ, ವೈ.ಕೆ.ಹನುಮಂತಯ್ಯ ಇದ್ದರು.